ಮೆಕ್ಕೆಜೋಳ (Maize) ಖರೀದಿ ಕೇಂದ್ರ ತೆರೆಯಲು ಆಗ್ರಹ

ಮೆಕ್ಕೆಜೋಳಕ್ಕೆ (Maize) ಕ್ವಿಂಟಲ್​ಗೆ 3000 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಹುಬ್ಬಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ದೀಪಾ ಧಾರವಾಡ, ರಾಮಣ್ಣ ಗಾಣಗೇರ, ಅಣ್ಣಪ್ಪ ಕುಲಕರ್ಣಿ, ಯಲ್ಲಪ್ಪ ಹುಬ್ಬಳ್ಳಿ, ಸಂಗಮೇಶ ಉಣಕಲ್, ಬಸವರಾಜ ಮೊರಬದ, ಇತರರು ಇದ್ದರು.
ಮೆಕ್ಕೆಜೋಳಕ್ಕೆ (Maize) ಕ್ವಿಂಟಲ್​ಗೆ 3000 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಹುಬ್ಬಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ದೀಪಾ ಧಾರವಾಡ, ರಾಮಣ್ಣ ಗಾಣಗೇರ, ಅಣ್ಣಪ್ಪ ಕುಲಕರ್ಣಿ, ಯಲ್ಲಪ್ಪ ಹುಬ್ಬಳ್ಳಿ, ಸಂಗಮೇಶ ಉಣಕಲ್, ಬಸವರಾಜ ಮೊರಬದ, ಇತರರು ಇದ್ದರು.
Published on
ಹುಬ್ಬಳ್ಳಿ: ಮೆಕ್ಕೆಜೋಳಕ್ಕೆ (Maize) ಕ್ವಿಂಟಲ್​ಗೆ 3000 ರೂ. ಬೆಂಬಲ ಬೆಲೆ ನಿಗದಿಪಡಿಸಿ ಕೂಡಲೇ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿ ರೈತರು ಹುಬ್ಬಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ರೈತ ಕೃಷಿ ಕಾರ್ವಿುಕರ ಸಂಘಟನೆಯ ಹುಬ್ಬಳ್ಳಿ ತಾಲೂರು ಸಮಿತಿಯಿಂದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಧಾರವಾಡ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ಮೆಕ್ಕೆಜೋಳ ಬೆಳೆದ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತ ಎಕರೆಗೆ 20-25 ಸಾವಿರ ರೂ. ಖರ್ಚು ಮಾಡಿ ಅಂದಾಜು 20 ಕ್ವಿಂಟಲ್ ಮೆಕ್ಕೆಜೋಳವನ್ನು ಬೆಳೆದಿದ್ದಾನೆ. ಆದರೆ, ಮೆಕ್ಕೆಜೋಳವನ್ನು ಕ್ವಿಂಟಲ್​ಗೆ 1500-1600 ರೂ. ಗೆ ಮಾರುವ ಪರಿಸ್ಥಿತಿ ನಿರ್ವಣವಾಗಿದೆ. ಈ ಬೆಲೆಗೆ ಮಾರಾಟ ಮಾಡಿದರೆ ಗೊಬ್ಬರಕ್ಕೆ ಮಾಡಿದ ಖರ್ಚು ಮರಳಿ ಬರುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಈ ಬಾರಿ ಅತಿಯಾದ ಮಳೆಯಿಂದ ಬೆಳೆ ನಷ್ಟ ಉಂಟಾಗಿದೆ. ಪರಿಹಾರ ಹಣ ಬರದೇ ಕೃಷಿ ಬಿಕ್ಕಟ್ಟಿನಿಂದ ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಹುಬ್ಬಳ್ಳಿ ಅಮರಗೋಳ ಎಪಿಎಂಸಿಯಲ್ಲಿ ಕ್ವಿಂಟಲ್ ಈರುಳ್ಳಿಗೆ 50 ರೂ. ಹರಾಜು ಕೂಗಿದ್ದು, ರೈತರ ಬದುಕನ್ನೇ ಅಣಕಿಸುವಂತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ದಲ್ಲಾಳಿಗಳ ಕೈಗಳಿಂದ ದರ ಏರಿಳಿತಕ್ಕೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿಯವರಿಗೆ ರವಾನಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘದ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ತಾಲೂಕು ಅಧ್ಯಕ್ಷ ರಾಮಣ್ಣ ಗಾಣಗೇರ, ಅಣ್ಣಪ್ಪ ಕುಲಕರ್ಣಿ, ಯಲ್ಲಪ್ಪ ಹುಬ್ಬಳ್ಳಿ, ಸಂಗಮೇಶ ಉಣಕಲ್, ಬಸವರಾಜ ಮೊರಬದ, ಪ್ರಭು ಮೊರಬದ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net