ದಾನ-ಧರ್ಮದಿಂದ (Cow Worship) ದ್ವಿಗುಣ ಪುಣ್ಯ

ಹಳೇ ಹುಬ್ಬಳ್ಳಿ ಅರವಿಂದನಗರ (Cow Worship) ಮಾತೆ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗೋಮಾತೆ ಪೂಜೆ ಮತು ಮುತ್ತೈದೆಯರಿಂದ ಬಾಗಿನ ಅರ್ಪಣೆ ನಡೆಯಿತು.
ಹಳೇ ಹುಬ್ಬಳ್ಳಿ ಅರವಿಂದನಗರ (Cow Worship) ಮಾತೆ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗೋಮಾತೆ ಪೂಜೆ ಮತು ಮುತ್ತೈದೆಯರಿಂದ ಬಾಗಿನ ಅರ್ಪಣೆ ನಡೆಯಿತು.
Published on
ಹುಬ್ಬಳ್ಳಿ: ಅಧಿಕ ಮಾಸದ ಅಂಗವಾಗಿ (Cow Worship) ಹಳೇ ಹುಬ್ಬಳ್ಳಿ ಅರವಿಂದನಗರ ಮಾತೆ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗೋಮಾತೆ ಪೂಜೆ ಮತ್ತು 33 ಮುತ್ತೈದೆಯರಿಗೆ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಿತು.
ದೇವಸ್ಥಾನದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ಮಹಾಭಿಷೇಕ, ವಿಶೇಷ ಅಲಂಕಾರದೊಂದಿಗೆ ಉದಯಪೂಜೆ ನೆರವೇರಿಸಲಾಯಿತು. ಗೀತಾ ಅಂಗಡಿ ಮತ್ತು ರೂಪಾ ಗೊಂಬಿ ಅವರು ಶ್ರೀ ದುರ್ಗಾ ಸಪ್ತಶತಿ ಪಾರಾಯಣ ಮಾಡಿದರು. ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರು ಮತ್ತು ಮುತ್ತೈದೆಯರು ಗೋಮಾತೆಯ ಪಾದಪೂಜೆ ಮಾಡಿ ಆರತಿಯೊಂದಿಗೆ ಬರಮಾಡಿಕೊಂಡು ವಸ್ತ್ರ-ಉಡುಗೆಗಳನ್ನು ಹಾಗೂ ಬಾಗಿನ ಸಮರ್ಪಿಸಿದರು.
ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸವು ಹಿಂದೂ ಪಂಚಾಗದ ಪ್ರಕಾರ ಬಹಳ ವಿಶೇಷವಾಗಿದ್ದು, ಈ ಸಂದರ್ಭದಲ್ಲಿ ಕೈಗೊಳ್ಳುವ ಪೂಜಾ ವಿಧಿವಿಧಾನಗಳು ದೇವರ ಅನುಗ್ರಹಕ್ಕೆ ಹೆಚ್ಚು ಪಾತ್ರವಾಗುತ್ತದೆ ಎಂದರು.
ಅಧಿಕ ಮಾಸದಲ್ಲಿ ತೀರ್ಥಯಾತ್ರೆಗಳನ್ನು ಕೈಗೊಳ್ಳಬೇಕು ಮತ್ತು ದಾನಧರ್ಮಗಳನ್ನು ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಆಶೀರ್ವಚನ ನೀಡಿದರು.
ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ, ಮಾಜಿ ಯೋಧ ಶಿವಾಜಿ ಗಾಂವಕರ, ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಶರಣಪ್ಪ ಗೊಡಚಪ್ಪನವರ, ಆನಂದ ಮುರಗೋಡ, ದೀಪಾ ಗೌರಿ, ಶಿಲ್ಪಾ ಗೌರಿ, ಕೀರ್ತಪ್ಪ ಗೋಟುರ, ಹನಮಂತಪ್ಪ ಧೂಪದ, ಮಹಾದೇವ ಸುಲಾಖೆ, ಬಸವಂತಪ್ಪ ಅನವಾಲ್, ವಿರುಪಾಕ್ಷಿ ಚಲವಾದಿ, ಗುರುಪಾದಗೌಡ ಪಾಟೀಲ, ಶ್ರೀಧರ ಕನಮಕಲ್, ಲಕ್ಷ್ಮಣ ವಡ್ಡರ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ, ಹಿರಿಯರಾದ ಪಾರ್ವತಿದೇವಿ ಪಾಟೀಲ, ಭಕ್ತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net