ಒತ್ತಡ, ಶಿಫಾರಸ್ಸಿಗೆ (Cogress Form) ಅವಕಾಶ ಇಲ್ಲ

ಜಿಲ್ಲಾ ಕಾಂಗ್ರೆಸ್​ಗೆ ನೂತನ (Cogress Form) ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಶನಿವಾರ ಹುಬ್ಬಳ್ಳಿಗೆ ಆಗಮಿಸಿದ ಎಐಸಿಸಿ ವೀಕ್ಷಕ ಸಯ್ಯದ್ ಅಜ್ಮತುಲ್ಲಾ ಹುಸೇನಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅರ್ಜಿ ನಮೂನೆ ಬಿಡುಗಡೆ ಮಾಡಿದರು.
ಜಿಲ್ಲಾ ಕಾಂಗ್ರೆಸ್​ಗೆ ನೂತನ (Cogress Form) ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಶನಿವಾರ ಹುಬ್ಬಳ್ಳಿಗೆ ಆಗಮಿಸಿದ ಎಐಸಿಸಿ ವೀಕ್ಷಕ ಸಯ್ಯದ್ ಅಜ್ಮತುಲ್ಲಾ ಹುಸೇನಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅರ್ಜಿ ನಮೂನೆ ಬಿಡುಗಡೆ ಮಾಡಿದರು.
Published on
ಹುಬ್ಬಳ್ಳಿ: ಈ ಬಾರಿ ಜಿಲ್ಲಾ (Cogress Form) ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪಾರದರ್ಶಕವಾಗಿ ನಡೆಯಲಿದೆ. ಕಾರ್ಯಕರ್ತರ ಸಲಹೆ, ಭಾವನೆಗಳನ್ನು ಪರಿಗಣಿಸಲಾಗುವುದು. ಯಾವುದೇ ಒತ್ತಡ, ಶಿಫಾರಸ್ಸಿಗೆ ಅವಕಾಶ ಇರುವುದಿಲ್ಲ ಎಂದು ಎಐಸಿಸಿ ವೀಕ್ಷಕ ಸಯ್ಯದ್ ಅಜ್ಮತುಲ್ಲಾ ಹುಸೇನಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ವರಿಷ್ಠರ ನಿರ್ಧಾರದಂತೆ ಸಂಘಟನ್ ಸೃಜನ್ ಅಭಿಯಾನದಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಸಲಾಗುತ್ತಿದೆ. ಯಾರೋ 2-3 ಜನ ಮುಖಂಡರು ಎಸಿ ರೂಮ್ಲ್ಲಿ ಕುಳಿತು ಆಯ್ಕೆ ಮಾಡುವುದಿಲ್ಲ. ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ಮುಖಂಡರ ವರೆಗೆ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗುವುದು. ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶ ಇರುತ್ತದೆ ಎಂದು ತಿಳಿಸಿದರು.
ಅಂತಿಮವಾಗಿ 6 ಜನರ ಹೆಸರು ಶಿಫಾರಸ್ಸು ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನಮಗೆ ಸೂಚಿಸಿದ್ದಾರೆ. ಇದರಲ್ಲಿ ಬಹುಸಂಖ್ಯಾತ, ಅಲ್ಪಸಂಖ್ಯಾತ, ಹಿಂದುಳಿದ, ಎಸ್​ಸಿ-ಎಸ್​ಟಿ, ಮಹಿಳೆ, ಯುವಕರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಸಂಘಟನ್ ಸೃಜನ್ ಅಭಿಯಾನ ಗುಜರಾತ್​ನಿಂದ ಆರಂಭಿಸಲಾಗಿದೆ. ಈ ಅಭಿಯಾನದಡಿ ಇಲ್ಲಿಯವರೆಗೆ ದೇಶದಲ್ಲಿ 770 ಜಿಲ್ಲಾಧ್ಯಕ್ಷರ ನೇಮಕ ನಡೆದಿದೆ. ಎಐಸಿಸಿ ಯಿಂದ ನೇಮಕಗೊಂಡ ವೀಕ್ಷಕರು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ವರದಿ ಸಲ್ಲಿಸುವರು. ಜಿಲ್ಲಾಧ್ಯಕ್ಷರ ನೇಮಕದಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ ಸಿಗಲಿದೆ ಎಂದರು.
ಪಕ್ಷದ ಮುಖಂಡರಾದ ಸಯೀದ್ ಅಹ್ಮದ್, ಬಿ.ಆರ್. ಯಾವಗಲ್, ವೆಂಕಟೇಶ ಹೆಗಡೆ ಹೊಸಬಾಳೆ, ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ನಾಗರಾಜ ಗೌರಿ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net