ಶಿಸ್ತು, ಸಮರ್ಪಣೆ, (Chakravyuh)ದೂರದೃಷ್ಟಿಯಿಂದ ಯಶಸ್ಸು

ಹುಬ್ಬಳ್ಳಿಯ ಡಿ.ಕೆ. ಎಸ್. ಎಜ್ಯುಕೇಶನ್ (Chakravyuh)ಟ್ರಸ್ಟ್​ನ ಚೇತನ ಬಿಜಿನೆಸ್ ಸ್ಕೂಲ್ ಆಯೋಜಿಸಿರುವ ಮೂರು ದಿನಗಳ ನಿರ್ವಹಣಾ ಉತ್ಸವ-ಚಕ್ರವ್ಯೂಹ ಅನ್ನು ಡಾ. ವಿ.ಎಸ್.ವಿ. ಪ್ರಸಾದ ಉದ್ಘಾಟಿಸಿದರು. ವಿಶ್ಲೇಷಾ ಪಾಟೀಲ, ರಾಜಣ್ಣ ಕೊರವಿ, ಡಾ. ವಿ.ಎಂ. ಕೊರವಿ, ಶ್ರೇಯಸ್ ಮುರಡೇಶ್ವರ, ಇತರರು ಇದ್ದರು.
ಹುಬ್ಬಳ್ಳಿಯ ಡಿ.ಕೆ. ಎಸ್. ಎಜ್ಯುಕೇಶನ್ (Chakravyuh)ಟ್ರಸ್ಟ್​ನ ಚೇತನ ಬಿಜಿನೆಸ್ ಸ್ಕೂಲ್ ಆಯೋಜಿಸಿರುವ ಮೂರು ದಿನಗಳ ನಿರ್ವಹಣಾ ಉತ್ಸವ-ಚಕ್ರವ್ಯೂಹ ಅನ್ನು ಡಾ. ವಿ.ಎಸ್.ವಿ. ಪ್ರಸಾದ ಉದ್ಘಾಟಿಸಿದರು. ವಿಶ್ಲೇಷಾ ಪಾಟೀಲ, ರಾಜಣ್ಣ ಕೊರವಿ, ಡಾ. ವಿ.ಎಂ. ಕೊರವಿ, ಶ್ರೇಯಸ್ ಮುರಡೇಶ್ವರ, ಇತರರು ಇದ್ದರು.
Published on
ಹುಬ್ಬಳ್ಳಿ: ವಿಶ್ವದಾದ್ಯಂತ ಸ್ಪರ್ಧಾತ್ಮಕ (Chakravyuh)ವಾತಾವರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಸಾಧಿಸಲು ಶಿಸ್ತು, ಸಮರ್ಪಣೆ ಹಾಗೂ ದೂರದೃಷ್ಟಿ ಅತ್ಯವಶ್ಯಕವೆಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಕರೆ ನೀಡಿದರು.
ನಗರದ ಡಿ.ಕೆ. ಎಸ್. ಎಜ್ಯುಕೇಶನ್ ಟ್ರಸ್ಟ್​ನ ಚೇತನ ಬಿಜಿನೆಸ್ ಸ್ಕೂಲ್ ಆಯೋಜಿಸಿರುವ ಮೂರು ದಿನಗಳ ನಿರ್ವಹಣಾ ಉತ್ಸವ-ಚಕ್ರವ್ಯೂಹ ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ (ಎಐ)ಯನ್ನು ಸದುಪಯೋಗಕ್ಕಾಗಿ ಬಳಸುವುದು ಸ್ವಾಗತಾರ್ಹವಾದರೂ, ಅದರ ಮೇಲೆ ಸಂಪೂರ್ಣ ಅವಲಂಬನೆ ಅಪಾಯಕಾರಿ ಎಂದು ಎಚ್ಚರಿಸಿದರು.
ಅಮೆರಿಕದ ಅರ್ಲಿ ವಾರ್ನಿಂಗ್ ಸರ್ವಿಸಸ್ ಸಂಸ್ಥೆಯ ಉಪಾಧ್ಯಕ್ಷೆ ವಿಶ್ಲೇಷಾ ಪಾಟೀಲ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಶೀಲತೆ, ವ್ಯಕ್ತಿತ್ವ ವಿಕಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ತಮ್ಮೊಳಗಿನ ನಾಯಕತ್ವವನ್ನು ಅರಿತುಕೊಳ್ಳಬೇಕು. ನಿರಂತರ ಅಧ್ಯಯನ ಮತ್ತು ಹೊಂದಾಣಿಕೆಯ ಮನೋಭಾವ ಇಂದಿನ ಕಾಲದ ಅಗತ್ಯ. ಎಐ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಮತ್ತು ಸದುದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಟ್ರಸ್ಟ್​ನ ಗೌರವ ಕಾರ್ಯದರ್ಶಿ ರಾಜಣ್ಣ ಕೊರವಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಡಾ. ವಿ. ಎಂ. ಕೊರವಿ ಮಾತನಾಡಿ, ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ, ನಾಯಕತ್ವ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ತಿಳಿಸಿದರು.
ಪೊ›. ಮಣಿಕ್ ಸ್ವಾಗತಿಸಿದರು. ಪ್ರೊ. ಶ್ರೇಯಸ್ ಮುರಡೇಶ್ವರ ಮತ್ತು ಪ್ರೊ. ಮಂಗಳಾ ಯಾರಗಟ್ಟಿ ಪರಿಚಯಿಸಿದರು. ಪೊ›. ರಾಮಕಾಂತ ಕುಲಕರ್ಣಿ ಸಂಸ್ಥೆಯ ಹಿನ್ನಲೆ ಮತ್ತು ಬೆಳವಣಿಗೆಯ ಕುರಿತು ವಿವರಿಸಿದರು. ವಿದ್ಯಾರ್ಥಿ ಸಂಯೋಜಕರಾದ ಕಾವೇರಿ ಕುಲಕರ್ಣಿ ಮತ್ತು ಮೋಹಿತ್ ಧರ್ಮದಾಸ ನಿರ್ವಹಿಸಿದರು. ಪ್ರೊ. ಅನಿರುದ್ಧ ಅಂಕೋಲೇಕರ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net