

ಹುಬ್ಬಳ್ಳಿ: ಪ್ರಾಪಂಚಿಕ ಚಿಂತನೆಯಿಂದ ಅಶಾಂತಿ, (Camp) ಭಗವದ್ ಚಿಂತನೆಯಿಂದ ಪರಮಶಾಂತಿ. ಇಂತಹ ಪರಮ ಶಾಂತಿಯನ್ನು ನೀಡುವ ಹಾಗೂ ಜಾತ್ಯಾತೀತವಾಗಿ ಸರ್ವರಿಗೂ ಅದ್ವೈತ ವೇದಾಂತ ತತ್ವವನ್ನು ಭೋದಿಸಿ ಏಕೈಕ ಸ್ಥಾನವೆಂದರೆ ಅದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಎಂದು ಕಾಡರಕೊಪ್ಪ ಶ್ರೀ ಪೂರ್ಣಾನಂದ ಆಶ್ರಮದ ವೇದಾಂತಾಚಾರ್ಯ ಶ್ರೀ ದಯಾನಂದ ಸರಸ್ವತಿ ಸ್ವಾಮಿ ಬಣ್ಣಿಸಿದರು.