ದೇಶದ ವಾಣಿಜ್ಯ ರಾಜಧಾನಿ, ಪ್ರಮುಖ ಮಹಾನಗರವಾದ ಮುಂಬೈ ಅಳವಡಿಸಿಕೊಂಡ ಅತ್ಯುತ್ತಮ ಆಡಳಿತಾತ್ಮಕ ಪದ್ಧತಿಗಳು, ನವೀನ ತಂತ್ರಜ್ಞಾನಗಳು ಹಾಗೂ ಸ್ಮಾರ್ಟ್ ನಗರಾಭಿವೃದ್ಧಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತಂದು ಹುಬ್ಬಳ್ಳಿ-ಧಾರವಾಡವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವುದು ಈ ಭೇಟಿಯ ಉದ್ದೇಶ. ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಆಡಳಿತ ನಿರ್ವಹಣೆಗೆ ಅನೇಕ ವಿಭಾಗಗಳನ್ನು ರಚನೆ ಮಾಡಲಾಗಿದೆ. ಅಲ್ಲಿ, ಮೇಯರ್ ಅವಧಿ ಎರಡೂವರೆ ವರ್ಷಗಳದ್ದಾಗಿದೆ. ಅಲ್ಲಿಯ ವಿಪತ್ತು ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆಯಲಾಯಿತು ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.