ಅಂಕಲೇಶ್ವರದಲ್ಲಿ (artificial limb) ಕೃತಕ ಕಾಲು ಜೋಡಣೆ ಶಿಬಿರ

ಹುಬ್ಬಳ್ಳಿಯಲ್ಲಿ  (artificial limb) ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಹಾವೀರ ಲಿಂಬ್ ಸೆಂಟರ್​ನ ಸಾಧನೆಯ ಕಿರು ಪುಸ್ತಕ ಸ್ವಾಭಿಮಾನ ಬಿಡುಗಡೆ ಮಾಡಲಾಯಿತು. ಮಹೇಂದ್ರ ಸಿಂಘಿ, ಗೌತಮ ಗುಲೇಚ್ಛಾ, ಪ್ರಕಾಶ ಕಟಾರಿಯಾ, ಮಾನವ ಸಂಘವಿ, ಮಹಾವೀರ ಕುಂದೂರ, ಸುನೀಲ ಬೂರಟ್, ಅಶೋಕ ಕೋಠಾರಿ, ಸುಭಾಷ ಡಂಕ್, ಇತರರು ಇದ್ದರು.
ಹುಬ್ಬಳ್ಳಿಯಲ್ಲಿ (artificial limb) ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಹಾವೀರ ಲಿಂಬ್ ಸೆಂಟರ್​ನ ಸಾಧನೆಯ ಕಿರು ಪುಸ್ತಕ ಸ್ವಾಭಿಮಾನ ಬಿಡುಗಡೆ ಮಾಡಲಾಯಿತು. ಮಹೇಂದ್ರ ಸಿಂಘಿ, ಗೌತಮ ಗುಲೇಚ್ಛಾ, ಪ್ರಕಾಶ ಕಟಾರಿಯಾ, ಮಾನವ ಸಂಘವಿ, ಮಹಾವೀರ ಕುಂದೂರ, ಸುನೀಲ ಬೂರಟ್, ಅಶೋಕ ಕೋಠಾರಿ, ಸುಭಾಷ ಡಂಕ್, ಇತರರು ಇದ್ದರು.
Published on
ಹುಬ್ಬಳ್ಳಿ: ಗುಜರಾತ್ (Artificial limb) ರಾಜ್ಯದ ಅಂಕಲೇಶ್ವರದಲ್ಲಿ ಪ್ರಥಮ ಬಾರಿಗೆ ಡಿ. 28ರಂದು ಉಚಿತ ಕೃತಕ ಕಾಲು ಜೋಡಣೆ ಶಿಬಿರ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್​ನ ಮಹಾವೀರ ಲಿಂಬ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ತಿಳಿಸಿದರು.
ಸೆಂಟರ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ ಬರೂಚ್​ನ ರೋಟರಿ ಕ್ಲಬ್ ಅಫ್ ಅಂಕಲೇಶ್ವರ ಹಾಗೂ ಓಎನ್​ಜಿಸಿ ಅಸೆಟ್, ಅಂಕಲೇಶ್ವರ ಇವರ ಸಹಯೋಗದೊಂದಿಗೆ ಆಂಕಲೇಶ್ವರನ ಕಮ್ಯುನಿಟಿ ಸೆಂಟರ್ (ಓಎನ್​ಜಿಸಿ ಕಾಲನಿ) ನಲ್ಲಿ ಶಿಬಿರ ನಡೆಯಲಿದೆ. ಅಹಮದಾಬಾದ, ಬರೋಡಾ, ಬರೂಚ್ ಮತ್ತು ಅಂಕಲೇಶ್ವರನ ಸುತ್ತ ಮುತ್ತಲಿನ ಜಿಲ್ಲೆಗಳ 100 ಜನ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲುಗಳನ್ನು ಜೋಡಣೆ ಮಾಡಲಾಗುವುದು ಎಂದರು.
1995ರಲ್ಲಿ ಆರಂಭಗೊಂಡ ಮಹಾವೀರ ಲಿಂಬ್ ಸೆಂಟರ್ ಇಲ್ಲಿಯವರೆಗೂ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ, ತೆಲಂಗಾಣ ಸೇರಿ 350 ಶಿಬಿರಗಳನ್ನು ಏರ್ಪಡಿಸಿ 55,000 ಕ್ಕಿಂತಲೂ ಹೆಚ್ಚು ಜನರಿಗೆ ಉಚಿತವಾಗಿ ಕೃತಕ ಕಾಲುಗಳನ್ನು ಜೋಡಣೆ ಮಾಡಿದ್ದೇವೆ. ಪ್ರತಿ ಕಾಲಿಗೆ 5ರಿಂದ 6 ಸಾವಿರ ರೂ. ವೆಚ್ಚ ತಗಲುತ್ತದೆ. ದಾನಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಆರ್ಥಿಕ ನೆರವಿನಿಂದ ಈ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೆಂಟರ್ ಚೇರ್ಮನ್ ಗೌತಮ ಗುಲೇಚ್ಛಾ, ಕಾರ್ಯದರ್ಶಿ ಪ್ರಕಾಶ ಕಟಾರಿಯಾ, ಖಜಾಂಚಿ ಮಾನವ ಸಂಘವಿ, ಮಹಾವೀರ ಕುಂದೂರ, ಸುನೀಲ ಬೂರಟ್, ಅಶೋಕ ಕೋಠಾರಿ, ನಿರ್ಮಲ ಜೈನ್, ಮಹೇಂದ್ಪ ಜೈನ್, ಸುಭಾಷ ಡಂಕ್, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net