ಯಲ್ಲಾಪುರ ಸಮೀಪ ಕ್ರೂಸರ್-ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಧಾರವಾಡ ಮೂಲದ 6 ಮಂದಿ ದುರ್ಮರಣ!

ಯಲ್ಲಾಪುರ ಸಮೀಪ ಅಪಘಾತವಾಗಿದೆ.
ಯಲ್ಲಾಪುರ ಸಮೀಪ ಅಪಘಾತವಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಕ್ರೂಸರ್ ಲಾರಿ ನಡುವೆ ಅಪಘಾತ
  • ಧಾರವಾಡ ಮೂಲದವರು ಸಾವು
ಯಲ್ಲಾಪುರ: ಕ್ರೂಸರ್ ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 6 ಜನ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ತಾಲೂಕಿನ ಆರತಿಬೈಲ್ ಘಟ್ಟದ ಬಳಗಾರ ಕ್ರಾಸ್ ಬಳಿ ನಡೆದಿದೆ.
 
ಧಾರವಾಡದ ಬಸವರಾಜ್ ಕನಕನವರ್ (48), ಧಾರವಾಡ ಜಯನಗರದ ಅಭಿಶೇಕ್ ಈಶ್ವರ (28) ವರ್ಷ, ಸಾಧನಕೇರಿಯ ಅಕ್ಷಯ (26), ಸಪ್ತಾಪುರದ ಅಭಿಷೇಕ (26), ಕುರುಬಗಟ್ಟಿಯ ಸಂಜಯ್ ಅಂಗಡಿ (38) ಹಾಗೂ ಮುರುಗಾಮಠದ ಮಂಜುನಾಥ ಅಶೋಕ ಚುಳಕಿ (33) ಮೃತರು.  

9 ಜನ ಗೆಳೆಯರು ಒಟ್ಟಾಗಿ ಧರ್ಮಸ್ಥಳ, ಕೊಲ್ಲೂರು ಪ್ರವಾಸಕ್ಕೆ ಕ್ರೂಸರ್ ಮೇಲೆ ಹೊರಟಿದ್ದರು. ಆರತಿಬೈಲ್ ಘಟ್ಟದ ಬಳಗಾರ ಕ್ರಾಸ್ ಬಳಿ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಐದು ಜನ ಮೃತಪಟ್ಟಿದ್ದರು.

ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಮಂಜುನಾಥ ಚುಳಕಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 6 ಕ್ಕೆ ಏರಿದೆ. 

ಘಟನೆಯಿಂದ ಕೆಲ‌ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್, ಡಿ.ವೈ.ಎಸ್.ಪಿ ಗೀತಾ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net