

ವಿಜಯವಾಣಿ ಸುದ್ದಿಜಾಲ ಉಳ್ಳಾಲ
30 ವರ್ಷಗಳಿಂದ ಗ್ರಾಮದಲ್ಲಿ ನಿವೇಶನ ನೀಡಿಲ್ಲ. ಆದರೆ ಸರ್ಕಾರಿ ಜಮೀನು ವಾರಾಟ ಪ್ರಕ್ರಿಯೆ ನಿರಂತರ ನಡೆಯುತ್ತಿದೆ. ನಿವೇಶನಕ್ಕಾಗಿ ಹೋರಾಟ ತೀವ್ರಗೊಳ್ಳಬೇಕಿದೆ. ಜಮೀನು ಸಿಕ್ಕ ಬಳಿಕ ನಾಯಕರಿಗೆ ಜೈಕಾರ, ಫ್ಲೆಕ್ಸ್ ಹಾಕಿ ಅಭಿನಂದಿಸೋಣ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.
ಸಿಪಿಐಎಂ ಕಚೇರಿಯಲ್ಲಿ ಶುಕ್ರವಾರ ನಡೆದ ಹರೇಕಳ ಗ್ರಾಮ ನಿವೇಶನ ರಹಿತರ ಸಭೆಯಲ್ಲಿ ಮಾತನಾಡಿದರು.
ಸಿಪಿಐಎಂ ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ ವಾತನಾಡಿ, ರಾಜಕಾರಣಿಗಳು ನೀಡುವ ಭರವಸೆ ಒಪ್ಪಲು ಅಸಾಧ್ಯ, ಇನ್ನೇನಿದ್ದರೂ ಅಧಿಕಾರಿಗಳು ಲಿಖಿತ ಭರವಸೆ ನೀಡಬೇಕು ಎಂದರು. ಪಂಚಾಯಿತಿ ಸದಸ್ಯ ಅಶ್ರಫ್ ಅಧಿಕಾರಿಗಳನ್ನು ಟೀಕಿಸಿದರು.
ಸಭೆಯಲ್ಲಿ ಫೆ.3ರಂದು ಮೀಸಲು ಜಮೀನಿನಲ್ಲಿ ಧರಣಿ ನಡೆಸುವ ತೀರ್ವಾನ ಕೈಗೊಳ್ಳಲಾಯಿತು. ಅಂದು ಬೆಳಗ್ಗೆ 10 ಗಂಟೆಗೆ ಗ್ರಾಮಚಾವಡಿಯಿಂದ ಮೆರವಣಿಗೆ ಮೂಲಕ ಮೀಸಲು ಜಮೀನಿನಲ್ಲಿ ಧರಣಿ ನಡೆಯಲಿದೆ. ತಹಸೀಲ್ದಾರ್ ಅಥವಾ ತಾಲೂಕು ಅಥವಾ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಲಿಖಿತ ಭರವಸೆ ನೀಡುವವರೆಗೆ ಧರಣಿ ನಡೆಸಲು ತೀರ್ವಾನ ಕೈಗೊಳ್ಳಲಾಯಿತು.
ಡಿವೈಎ್ ಉಳ್ಳಾಲ ವಲಯ ಕಾರ್ಯದರ್ಶಿ ರಿರಝ್ವಾನ್ ಹರೇಕಳ, ಸಿಐಟಿಯು ಮುಖಂಡ ಇಬ್ರಾಹಿಂ ಮದಕ, ಪ್ರಮುಖರಾದ ಬಶೀರ್ ಲಚ್ಚಿಲ್, ಉಮರಬ್ಬ, ಸತ್ತಾರ್ ಕೊಜಪಾಡಿ, ಎವರೆಸ್ಟ್ ಕುಟಿನ್ಹ, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.