ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0102
Published on

ಖಾನಾಪುರ: ತಾಲೂಕಿನ ನಂದಗಡ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಾನಾಪುರ ಹಾಗೂ ಮಹಾತ್ಮ ಗಾಂಧಿ ಪವಿಪೂರ್ವ ಮಹಾವಿದ್ಯಾಲಯದ ನಂದಗಡ ಇವರ ಸಯೋಗದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಬಸರಾಜ ಸೊಪ್ಪಿಮಠ ಮಾತನಾಡಿ ವಿದ್ಯಾರ್ಥಿಗಳು ದೇಶದ ಆಸ್ತಿ, ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ಕುಟುಂಬದಲ್ಲಿ ಮದ್ಯಪಾನ ಸೇವನೆ ಮಾಡುವವರು ಇದ್ದರೆ, ಅದನ್ನು ಮುಕ್ತ ಮಾಡುವ ಸಂಕಲ್ಪ  ವಿದ್ಯಾರ್ಥಿಗಳು ತೊಡಬೇಕು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಜ್ಞಾನ ನಿಧಿ ಯೋಜನೆ ಜತೆಗೆ ಹಲವಾರು ಯೋಜನೆಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಖಾನಾಪೂರ ತಾಲೂಕಿನ ಮಾನ್ಯ ಯೋಜನಾಧಿಕಾರಿ ಸಿಸಿ ಕುಂದ್ರಿ, ಉಪನ್ಯಾಸಕರಾದ ಡಾ. ಸಂಗಪ್ಪ ಕಟಗಿ, ಎಂ ಎಸ್ ಸನದಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ನಂದಗಡ ವಲಯದ ಮೇಲ್ವಿಚಾರದ ಮಹಾಂತೇಶ್ ಧೂಳಿಕೊಪ್ಪ, ಸೇವಾ ಪ್ರತಿನಿಧಿ ರಾಜೇಶ್ವರಿ ಕಬ್ಬೂರ, ಸುಶೀಲ, ಶಾಂತ ಎಂ, ಸುದೀಪ ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net