ಧನ್​ಧಾನ್ಯ ಕೃಷಿ ಯೋಜನೆ ರೈತರಿಗೆ ವರ

Published on

ಗುಡಿಬಂಡೆ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಧನ್​ಧಾನ್ಯ ಕೃಷಿ, ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್​ ಎಂಬ ನೂತನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ಹೇಳಿದರು. ನಗರದ ಕೃಷಿ ಇಲಾಖೆಯ ಕಚೇರಿಯಲ್ಲಿ ಭಾನುವಾರ ಕೇಂದ್ರ ಸರ್ಕಾರದ ನೂತನ ಯೋಜನೆಯಾದ ಪ್ರಧಾನಮಂತ್ರಿ ಧನ್​ಧಾನ್ಯ ಕೃಷಿ ಯೋಜನೆ ಹಾಗೂ ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್​ ಯೋಜನೆ ಉದ್ಘಾಟನೆಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ. ಯೋಜನೆಯು ಕೃಷಿ ಉತ್ಪನ್ನ ಹೆಚ್ಚಳ, ವಿವಿಧ ದವಸ ಧಾನ್ಯ ಬೆಳೆ, ಸಮಗ್ರ ಕೃಷಿ ಅಭಿವೃದ್ಧಿ, ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ, ರೈತರಿಗೆ ಅಲ್ಪಾವಧಿ ದೀರ್ಘಾವಧಿ ಹಣಕಾಸು ನೆರವು, ಪಂಚಾಯತ್​ ಮತ್ತು ಬ್ಲಾಕ್​ ಲೆವಲ್​ನಲ್ಲಿ ದವಸ ಧಾನ್ಯಗಳ ದಾಸ್ತಾನು ನಿಮಾರ್ಣದ ಗುರಿ ಹೊಂದಿದೆ. ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆ ಒಳಗೊಂಡಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು. ಕೃಷಿಕ ಸಮಾಜದ ಅಧ್ಯಕ್ಷ ಎಚ್​.ಎನ್​.ಮಂಜುನಾಥರೆಡ್ಡಿ, ಕೃಷಿಕ ಸಮಾಜದ ಸದಸ್ಯರು, ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net