

ತಲ್ಲೂರ: ಸಮೀಪದ ಜೀವಾಪುರ ಗ್ರಾಮದಲ್ಲಿ ಜು.25ರಿಂದ 29ರ ವರೆಗೆ ನೂತನ ಶ್ರೀ ದ್ಯಾಮಮ್ಮದೇವಿ ದೇವಸ್ಥಾನ ಲೋಕಾರ್ಪಣೆ, ದೇವಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಲಿವೆ.
ಜು.25ರಂದು ಶ್ರೀ ದ್ಯಾಮಮ್ಮದೇವಿ ದೇವಸ್ಥಾನದ ವಾಸ್ತು ಹೋಮ ಪೂಜೆ. ಬೆಳಗ್ಗೆ 10ಕ್ಕೆ ಸುಮಂಗಲೆಯರ ಕುಂಭ, ಆರತಿ ಹಾಗೂ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಗ್ರಾಮಕ್ಕೆ ದೇವಿ ಮೂರ್ತಿ ಸ್ವಾಗತಿಸಲಾಗುವುದು. ಸಂಜೆ 7 ಗಂಟೆಗೆ ಜಲವಾಸ ಜರುಗುವುದು. ಪ್ರವಚನ, ಅನ್ನಪ್ರಸಾದ, ಹರದೇಶಿ ಮತ್ತು ನಾಗೇಶಿ ಡೊಳ್ಳಿನ ಪದ ನಡೆಯಲಿವೆ.
ಜು.26ರಂದು ಎತ್ತುಗಳ ಚಕ್ಕಡಿ ಓಡಿಸುವ ಸ್ಪರ್ಧೆ, ಪ್ರವಚನ ಜರುಗಲಿದೆ. ಜು.27ರಂದು ಸಂಜೆ 6ರಿಂದ 7 ಗಂಟೆ ವರೆಗೆ ಪ್ರವಚನ, ಮಹಾಪ್ರಸಾದವಿದೆ. ರಾತ್ರಿ 9ಗಂಟೆಗೆ ರಸಮಂಜರಿ ಕಾರ್ಯಕ್ರಮವಿದೆ.
ಜು.28ರಂದು ಸಂಜೆ 6ರಿಂದ 7 ಗಂಟೆ ವರೆಗೆ ಪ್ರವಚನ, ರಾತ್ರಿ 8 ಗಂಟೆಗೆ ಎರಡು ಹಲ್ಲಿನ ಟಗರಿನ ಕಾಳಗ ಹಾಗೂ ಮಹಾಪ್ರಸಾದವಿದೆ.
ಜು.29ರಂದು ಬೆಳಗ್ಗೆ 5 ಗಂಟೆಗೆ ದೇವಿ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ. 6 ಗಂಟೆಗೆ ಹೋಮ, ಪೂಜೆ, ರುದ್ರಾಭಿಷೇಕವಿದೆ. ಕಳಸಾರೋಹಣವಿದೆ. 10 ಗಂಟೆಗೆ ಧರ್ಮಸಭೆ. ರಾತ್ರಿ 9.30ಕ್ಕೆ ಶ್ರೀ ದ್ಯಾಮಮ್ಮದೇವಿ ನವತರುಣ ನಾಟ್ಯ ಸಂದಿಂದ "ಜನಮೆಚ್ಚಿದ ನಾಯಕ' ನಾಟಕ ಪ್ರದರ್ಶನಗೊಳ್ಳಲಿದೆ.
ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ, ನಯಾನಗರದ ಗುರು ಅಭಿನವ ಸಿದ್ಧಲಿಂಗ ಸ್ವಾಮೀಜಿ, ಮುನವಳ್ಳಿಯ ಮುರರಾಜೇಂದ್ರ ಸ್ವಾಮೀಜಿ, ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಗುತ್ತಿಗೊಳಿ ಹೊಸಕೋಟಿ ಅಭಿನವ ರೇವಯ್ಯ ಸ್ವಾಮೀಜಿ, ಸೊಗಲದ ಚಿದಾನಂದ ಅವಧೂತ ಅಜ್ಜನವರು, ಹುಬ್ಬಳ್ಳಿ ಷಡರಿ ಸ್ವಾಮೀಜಿ, ರುದ್ರಾಪುರದ ಬ್ರಹ್ಮಾನಂದ ಗುರುಗಳು, ಬಬಲಾದಿ ಶಂಕ್ರಯ್ಯ ಮುತ್ಯಾ, ಬಸು ಅಜ್ಜನವರು ಸಾನ್ನಿಧ್ಯ ವಹಿಸುವರು.
ಸಂಸದ ಜಗದೀಶ ಶೆಟ್ಟರ ಉದ್ಘಾಟಿಸುವರು. ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆ ವಹಿಸುವರು. ವಿರೂಪಾ ಮಾಮನಿ ಜ್ಯೋತಿ ಬೆಳಗಿಸುವರು. ಮುಖ್ಯಅತಿಥಿಗಳಾಗಿ ಶಿವಾನಂದ ಪಾಟೀಲ, ಪ್ರಕಾಶ ನರಿ, ಮುದಕಪ್ಪ ಯರಡ್ಡಿ, ರಾಮಚಂದ್ರಪ್ಪ ಯರಡ್ಡಿ, ವೆಂಕಣ್ಣ ಯರಡ್ಡಿ, ಪ್ರವಿಣ ಸೋನವಾಲ್ಕರ, ಬಸಪ್ಪ ನರಿ, ರಾಮಪ್ಪ ಕುರಿ, ಈರಪ್ಪ ರಿತ್ತಿ, ಗೌಡಪ್ಪ ನಾಯ್ಕರ, ಕಲ್ಮೇಶ ಬಾಲರಡ್ಡಿ, ಭೀಮಪ್ಪ ಕುರಿ, ವೆಂಕಪ್ಪ ಅರಳಿಕಟ್ಟಿ, ಸದಾಶಿವ ಕಮಕೇರಿ, ಸುರೇಶ ಯರಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.