

ಮದ್ದೂರು: ನಗರಕೆರೆ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮದ್ದೂರು ಶಾಖೆ ವತಿಯಿಂದ ಡಿಎಫ್‌ಎಸ್ ಸ್ಯಾಚುರೇಷನ್ ಕ್ಯಾಂಪ್ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾದೇಶಿಕ ವ್ಯವಸ್ಥಾಪಕಿ ಎಸ್. ಸುಮನ್, ಕಾರ್ಯಕ್ರಮದಲ್ಲಿ ಪಿಎಂಜೆಡಿವೈ ಖಾತೆಗಳು ತೆರೆದು ಪಾಸ್‌ಬುಕ್ ವಿತರಿಸಲಾಗಿದೆ. ಜತೆಗೆ 2 ಲಕ್ಷ ರೂ. ಮೊತ್ತದ ಪಿಎಂಜೆಜೆಬಿವೈ ದಾವೆ ಚೆಕ್ ಅನ್ನು ಸಿ.ಚಂದ್ರು ಅವರಿಗೆ ಹಸ್ತಾಂತರಿಸಲಾಗಿದೆ. ಪಿಎಂಜಿಡಿವೈ 40 ಖಾತೆಗಳು, ಪಿಎಂಜೆಜೆಬಿವೈ 86, ಪಿಎಂಎಸ್‌ಬಿವೈ 123, ಎಪಿವೈ ನೋಂದಣಿ 15 ಹಾಗೂ ರೀ-ಕೆವೈಸಿ ಪೂರ್ಣಗೊಂಡಿದೆ. 62 ಆರ್‌ಬಿಐ ಪ್ರಾದೇಶಿಕ ನಿರ್ದೇಶಕರ ಭೇಟಿಯೊಂದಿಗೆ ನಡೆದ ಈ ಕ್ಯಾಂಪ್ ಗ್ರಾಮೀಣ ಕರ್ನಾಟಕದಲ್ಲಿ ಹಣಕಾಸು ಒಳಗೊಳ್ಳುವಿಕೆ ಮತ್ತು ಜನಜಾಗೃತಿ ಹೆಚ್ಚಿಸುವತ್ತ ಮಹತ್ವದ ಹೆಜ್ಜೆ ಇಡಲಾಗಿದೆ ಎಂದರು.
ಶಾಖಾ ವ್ಯವಸ್ಥಾಪಕಿ ಶ್ವೇತಾ ತಿವಾರಿ, ಕರ್ನಾಟಕ ಪ್ರದೇಶ ನಿರ್ದೇಶಕಿ ಸೇನಾಗುಪ್ತ, ಜನರಲ್ ಮ್ಯಾನೆಜರ್ ಮೀನಾಕ್ಷಿ ಗಾಂಜು ಹಾಗೂ ವಿಜಯಶ್ರೀ, ವೆಂಕಟ ರಾಘುರಾಮ ಚಿಂತ, ಅರುಣ್ ಕುಮಾರ್, ಸುಮನ್, ಅರುಣ್ ಕುಮಾರ್, ಸಿ.ಎಂ. ಮಾಲೇಶ್, ಕಸ್ತೂರಿ ಇದ್ದರು.