ಭಕ್ತರ ವಿಶ್ರಾಂತಿ ಕೇಂದ್ರ ಉದ್ಘಾಟನೆ

12-GPT-3
Published on

ಗುಂಡ್ಲುಪೇಟೆ: ಜಾತಿ, ಮತ, ಧರ್ಮಗಳನ್ನು ಮೀರಿ ಭಕ್ತಿಯಿಂದ ಪಾದಯಾತ್ರೆಯಲ್ಲಿ ಶಬರಿಮಲೆಗೆ ಹೋಗುವ ಭಕ್ತರ ಅನುಕೂಲಕ್ಕೆ ಟ್ರಸ್ಟ್, ವಿಶ್ರಾಂತಿ ಕೇಂದ್ರ ನಿರ್ಮಿಸಿ ಸಹಾಯ ಮಾಡಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.


ಕೇರಳದ ವಯನಾಡು ಜಿಲ್ಲೆಯ ಪುಂಗುಳಿ ಗ್ರಾಮದಲ್ಲಿ ಬತ್ತೇರಿ ಮಹಾಗಣಪತಿ ದೇವಸ್ಥಾನದ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಶಬರಿಮಲೆ ಯಾತ್ರಿಗಳ ವಿಶ್ರಾಂತಿ ಕೇಂದ್ರದ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.


ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕಾಲ್ನಡಿಗೆಯಲ್ಲಿ ಸಾಗುವ ಭಕ್ತರು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ದೇವಸ್ಥಾನದ ಟ್ರಸ್ಟ್, ಯಾತ್ರಿಗಳ ವಿಶ್ರಾಂತಿ ಕೇಂದ್ರ ನಿರ್ಮಿಸಿದೆ. ಜಾತಿ, ಮತ, ಧರ್ಮವನ್ನು ಮೀರಿ ನಾವೆಲ್ಲರೂ ಒಂದು ಎಂಬ ಸಂದೇಶ ಸಾರಲು ಈ ಕ್ಷೇತ್ರಕ್ಕೆ ಪೂಂಕಾವನಂ ಎಂದು ನಾಮಕರಣ ಮಾಡಿ ಮಹತ್ತರವಾದ ಕಾರ್ಯವನ್ನು ಮಾಡಿದೆ ಎಂದು ಮೆಚ್ಚುಗೆ ಸೂಚಿಸಿದರು.


ಇದೇ ವೇಳೆ ದಿ.ಎಚ್.ಎಸ್.ಮಹದೇವಪ್ರಸಾದ್ ಟ್ರಸ್ಟ್ ವತಿಯಿಂದ 50 ಸಾವಿರ ರೂ.ದೇಣಿಗೆಯನ್ನು ನೀಡಿದರು. ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ ಶಾಸಕ ಐ.ಸಿ.ಬಾಲಕೃಷ್ಣನ್, ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀವತ್ಸ, ಸುಲ್ತಾನ್ ಬತ್ತೇರಿ ಪುರಸಭೆ ಅಧ್ಯಕ್ಷ ಟಿ.ಕೆ.ರಮೇಶ್, ನಲ್ಪೂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೀಜ ಸತೀಶ್, ಮಹಾಗಣಪತಿ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಜಿ.ಗೋಪಾಲ್ ಪಿಳ್ಳೆ, ಪದಾಧಿಕಾರಿಗಳಾದ ಅವಿಥಾನ್, ಸುರೇಂದ್ರ, ಕೆ.ಎ.ಅಶೋಕನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net