ದಸರಾ ಸಂಭ್ರಮ ಶ್ರೀ ದೇವಿಗೆ ವಿಶೇಷ ಅಲಂಕಾರ ಗುಡಿಗೆ ಭಕ್ತರ ದಂಡು

ದಸರಾ ಹಬ್ಬದ ಶುರುವಾದ ಮೊದಲ ದಿನವಾದ ಭಾನುವಾರ ಎರಡನೇ ದಿನ‌‌ವಾದ ಸೋಮವಾರ ಶಕ್ತಿದೇವತೆಗಳ ದೇವಾಲಯಗಳಿಗೆ ಭಕ್ತರು ಆಗಮಿಸುತ್ತಿದ್ದರು.
IMG-20231016-WA0009
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ದಸರಾ ಹಬ್ಬದ ಶುರುವಾದ ಮೊದಲ ದಿನವಾದ ಭಾನುವಾರ ಎರಡನೇ ದಿನ‌‌ವಾದ ಸೋಮವಾರ ಶಕ್ತಿದೇವತೆಗಳ ದೇವಾಲಯಗಳಿಗೆ ಭಕ್ತರು ಆಗಮಿಸುತ್ತಿದ್ದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇಧ್ಯ ಸಮರ್ಪಿಸಿದರು. ನಗರದ ಶಹಾಬಜಾರ ಭವಾನಿ ಮಂದಿರ, ಅಪ್ಪನ ಕೆರೆ ಸಮೀಪದ ಯಲ್ಲಮ್ಮ ಗುಡಿ, ಲಾಲಗೇರಿ ಸಮೀಪದ ಭವಾನಿ ದೇವಾಲಯ, ಜೇವರ್ಗಿ ರಸ್ತೆಯ ಸಿಂದಗಿ ಅಂಬಾ ಭವಾನಿ ಗುಡಿ, ಬ್ರಹ್ಮಪುರದ ಅಂಭಾಭವಾನಿ  ಮೊದಲಾದ ದೇವಾಲಯಗಳಲ್ಲಿ ನವರಾತ್ರಿಯ ಅಂಗವಾಗಿ ದೇವಿಗೆ ವಿಶೇಷವಾದ ಅಲಂಕಾರ ಮಾಡಲಾಗಿದೆ. ದೇವಾಲಯಗಳಿಗೆ ವಿದ್ಯುತ್ ದೀಪ ಅಲಂಕಾರ ಮಾಡಿದ್ದು ಗಮನ ಸೆಳೆಯುತ್ತಿದೆ. ನವರಾತ್ರಿ ಶುರುವಾಗುವುದರೊಂದಿಗೆ  ಎಲ್ಲ ದಿನಗಳು ಶ್ರೇಷ್ಠವಾಗಿರುವುದರಿಂದ ಜನರು ಪಂಚಾಗ ಸಹ ನೋಡದೆ ತಮ್ಮ ಮನೆಗಳಲ್ಲಿನ ಶುಭ ಕೆಲಸಗಳಿಗೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net