ದೇವಳ ಜೀರ್ಣೋದ್ಧಾರದಿಂದ ಭಕ್ತರಿಗೆ ಯಶಸ್ಸು

Sid may 9-1
Published on

ವಿಜಯವಾಣಿ ಸುದ್ದಿಜಾಲ ಅಮಾಸೆಬೈಲು

ಶ್ರದ್ಧೆ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದಾಗ ಅನುಗ್ರಹ ಪ್ರಾಪ್ತಿಯಾಗುವುದರ ಜತೆಗೆ ಜೀವನದಲ್ಲೂ ಯಶಸ್ಸು ದೊರೆಯುತ್ತದೆ. ನರಸೀಪುರ ಶ್ರೀ ಯೋಗಾರೂಢ ನರಸಿಂಹ ದೇವಳ ಜೀರ್ಣೋದ್ಧಾರ ಕಾರ್ಯದಿಂದ ಕ್ಷೇತ್ರದ ಪಾವಿತ್ರೃತೆಯೊಂದಿಗೆ ಭಕ್ತರಿಗೆ ಇನ್ನಷ್ಟು ಶ್ರೇಯಸ್ಸು ಲಭಿಸಲಿದೆ ಎಂದು ಶೃಂಗೇರಿ ಮಠಾಧೀಶ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿ ಹೇಳಿದರು.

ರಟ್ಟಾಡಿ ಗ್ರಾಮದ ನರಸೀಪುರ ಶ್ರೀ ಯೋಗಾರೂಢ ನರಸಿಂಹ ದೇವಳದಲ್ಲಿ ಶುಕ್ರವಾರ ಶಿಲಾಮಯ ಗರ್ಭಗುಡಿ ಲೋಕಾರ್ಪಣೆ, ಪುನಃ ಪ್ರತಿಷ್ಠಾಪನೆ, ಬ್ರಹ್ಮ ಕುಂಭಾಭಿಷೇಕ ಮಹೋತ್ಸವದ ಪ್ರಯುಕ್ತ ಅಷ್ಟೋತ್ತರ ಶತ ಪರಿಕಲಶೈಃ ಸಹ ಕಲಾತತ್ವ ಬ್ರಹ್ಮಕುಂಭಾಭಿಷೇಕ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ, ಅಧ್ಯಕ್ಷ ಚಿತ್ತರಂಜನ್ ರಾವ್ ಮಾವಿನಕಾಡು, ಉಪಾಧ್ಯಕ್ಷ ಆರ್.ನವೀನಚಂದ್ರ ಶೆಟ್ಟಿ ರಟ್ಟಾಡಿ, ನವೀನಚಂದ್ರ ಹೆಗ್ಡೆ ತೊಂಬತ್ತು, ಖಜಾಂಚಿ ಶಂಕರನಾರಾಯಣ ಉಳ್ಳೂರ್ ನರಸೀಪುರ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ನರಸೀಪುರ ಶ್ರೀ ಯೋಗಾರೂಢ ನರಸಿಂಹ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಶಂಕರನಾರಾಯಣ ಕೊಡ್ಗಿ, ಪ್ರಧಾನ ತಂತ್ರಿ ನಾಗರಾಜ ಅಡಿಗ ಬಸವಾನಿ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನಂದೋಡಿ, ಸಹ ಅರ್ಚಕ ವೃಂದವರು, ಭಕ್ತರು ಉಪಸ್ಥಿತರಿದ್ದರು.

ಜ್ಯೋತಿಷಿ ಹಾಲಾಡಿ ತಟ್ಟುವಟ್ಟು ವಾಸುದೇವ ಜೋಯಿಸ್ ಸ್ವಾಗತಿಸಿದರು. ಉದಯ ಅಡಿಗ ಮತ್ತು ಬಳಗ ಕೊಡ್ಲಾಡಿ ಮಂತ್ರ ಪಠಿಸಿದರು. ನರಸಿಂಹ ಉಳ್ಳೂರ್ ವಂದಿಸಿದರು.

ಸನ್ಮಾನ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಶೃಂಗೇರಿ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಚಿತ್ತರಂಜನ್ ರಾವ್ ಮಾವಿನಕಾಡು, ಶಂಕರನಾರಾಯಣ ಉಳ್ಳೂರ್ ನರಸೀಪುರ, ಸುಬ್ರಹ್ಮಣ್ಯ ಭಟ್ ನಂದೋಡಿ, ಶಿವರಾಮ್ ಭಟ್ ಕೊಟ್ಟಕ್ಕಿ, ನರಸಿಂಹ ಉಳ್ಳೂರ್ ತಪಲು, ಶಿಲ್ಪಿ ಸದಾಶಿವ ಗುಡಿಕಾರ ಕಾರ್ಕಳ, ಶೀತಲ್ ಶೆಟ್ಟಿ ಗುಂಡಾಣ, ನಾಗರಾಜ ಅಡಿಗ ನಂಚಾರು, ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಪರವಾಗಿ ನಾಗರಾಜ ಮಂಜ ಮಾರಣಕಟ್ಟೆ ಸಹಿತ ಹಲವರನ್ನು ಸನ್ಮಾನಿಸಲಾಯಿತು.

ಶುಕ್ರವಾರ ಬೆಳಗ್ಗೆ ಗುರು ಗಣೇಶ ಪೂಜಾ, ಶ್ರೀ ಯೋಗಾರೂಢ ದೇವರ ಅಷ್ಠಬಂಧ ಪುನಃ ಪ್ರತಿಷ್ಠಾಪನೆ ಜೀವ ಕುಂಭಾಭಿಷೇಕ, ಮಹಾಪ್ರಾಣ ಪ್ರತಿಷ್ಠಾಪನೆ, ತತ್ವ ಕಲಶ ಸ್ಥಾಪನಾ, ಶಾಂತಿಹೋಮ, ಪ್ರಾಯಶ್ಚಿತ ಹೋಮ, ಬ್ರಹ್ಮಕಲಶ ಸ್ಥಾಪನಾ, ಪ್ರಧಾನ ಅಧಿವಾಸ ಹೋಮ, ಶ್ರೀಮಹಾಸ್ವಾಮಿಯವರಿಂದ ಅಷ್ಟೋತ್ತರ ಶತ ಪರಿಕಲಶೈಃ ಸಹ ಕಲಾತತ್ವ ಬ್ರಹ್ಮಕುಂಭಾಭಿಷೇಕ ನೆರವೇರಿದವು. ಬಳಿಕ ಶ್ರೀಗಳ ಪಾದುಕಾ ಪೂಜೆ, ಸಂಘ ಸಂಸ್ಥೆಗಳಿಂದ ಫಲಪುಷ್ಪ ಸಮರ್ಪಿಸಲಾಯಿತು. ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಯಕ್ಷಗಾನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net