ಸಮಾಜ ಸೇವೆಗೆ ಜೀವನ ಮುಡಿಪಾಗಿಟ್ಟರು

book
ಕಾನಾಹೊಸಹಳ್ಳಿ ಸಮೀಪದ ಹಿರೇಕುಂಬಳಗುಂಟೆ ಗ್ರಾಮದ ಪುಸ್ತಕ ಮನೆಯಲ್ಲಿ ಸಮಾಜಕಾರ್ಯ ಕ್ಷೇತ್ರದ ಪಿತಾಮಹ ಡಾ.ಎಚ್.ಎಂ.ಮರುಳಸಿದ್ದಯ್ಯನವರ 92ನೇ ಜನ್ಮದಿನ ಸಮಾರಂಭ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ಎಚ್.ವಿ.ವಸಂತ ಸಜ್ಜನ್, ಎಸ್.ಎಂ.ಗುರುಪ್ರಸಾದ್, ಧನಂಜಯ, ಜಿ.ಎಂ.ನಾಗರಾಜಗೌಡ, ಪ್ರತಿಭಾ ನಾಗರಾಜ ಇತರರಿದ್ದರು.
Published on

ಕಾನಹೊಸಹಳ್ಳಿ: ಸಮಾಜಕಾರ್ಯ ಕ್ಷೇತ್ರದ ಪಿತಾಮಹ ಡಾ.ಎಚ್.ಎಂ.ಮರುಳಸಿದ್ಧಯ್ಯ ಸ್ವಸ್ಥಿ ಸಂಸ್ಥೆ ಸ್ಥಾಪಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ದಿಟ್ಟಹೆಜ್ಜೆ ಇಟ್ಟಿದ್ದರು ಎಂದು ನಿವೃತ್ತ ಉಪನ್ಯಾಸಕ ಎಚ್.ವಸಂತ ಸಜ್ಜನ್ ಅಭಿಪ್ರಾಯಪಟ್ಟರು.

92ನೇ ಜನ್ಮ ಸ್ಮರಣೆ ಕಾರ್ಯಕ್ರಮ

ಸಮೀಪದ ಹಿರೇಕುಂಬಳಗುಂಟೆ ಗ್ರಾಮದ ಪುಸ್ತಕ ಮನೆಯಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಎಚ್.ಎಂ.ಮರುಳಸಿದ್ಧಯ್ಯನವರ 92ನೇ ಜನ್ಮ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು ತಾಲೂಕಿನ ಗಡಿ ಭಾಗದ ಹಿರೇಕುಂಬಳಗುಂಟೆಯನ್ನು ದೇಶ ವಿದೇಶಿಗರಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಪತ್ರಕರ್ತ ಎಸ್.ಎಂ.ಗುರುಪ್ರಸಾದ್ ಮಾತನಾಡಿ, ತಾವು ಹುಟ್ಟಿ ಬೆಳೆದ ಮನೆಯನ್ನು ಪ್ರತಿಯೊಬ್ಬರಿಗೂ ಜ್ಞಾನ ಕಟ್ಟಿಕೊಡುವ ಪುಸ್ತಕ ಮನೆಯನ್ನಾಗಿಸಿ ಶಿಕ್ಷಣ ಇಲಾಖೆಗೆ ದಾನ ನೀಡಿದ ಮರುಳಸಿದ್ದಯ್ಯನವರ ವ್ಯಕ್ತಿತ್ವ ಹಾಗೂ ನಡೆ-ನುಡಿಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಜೆ.ಎಂ.ಧನಂಜಯ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಪ್ರತಿಭಾ ಉಮೇಶ್, ಸ್ವಸ್ಥಿ ಸಂಸ್ಥೆಯ ಮುಖ್ಯಸ್ಥ ಎಚ್.ಬಿ.ಕಣ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಿ.ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಶ್ಯಾಮಸುಂದರ್ ಅವರನ್ನು ಗೌರವಿಸಲಾಯಿತು. ಗ್ರಾಮದ ಮುಖಂಡರಾದ ಎಂ.ಕರಿಯಣ್ಣ ಗೌಡ್ರು, ಎಚ್.ಎಂ.ಗುರುಬಸವರಾಜ, ಎಚ್.ಎಂ.ಉಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net