More

    ಮಹಾತ್ಮರ ನಡೆ-ನುಡಿ ಪಾಲಿಸೋಣ

    ಬ್ಯಾಡಗಿ: ಸಂತರು, ಮಹಾತ್ಮರ ಜೀವನ ಚರಿತ್ರೆ ಹಾಗೂ ನಡೆ-ನುಡಿಗಳು ಜೀವನಕ್ಕೆ ಆದರ್ಶವಾಗಿವೆ. ಪ್ರತಿಯೊಬ್ಬರೂ ಸತ್ಪುರುಷರ ಆದರ್ಶ ಬದುಕಿನ ವೈಚಾರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ನಾಮದೇವ ಹಾಗೂ ಭಾವಸಾರ ಕ್ಷತ್ರೀಯ ಸಮಾಜದ ತಾಲೂಕಾಧ್ಯಕ್ಷ ಡಾ. ಪ್ರಕಾಶ ಭಸ್ಮೆ ಹೇಳಿದರು. ಪಟ್ಟಣದ ವಿಠ್ಠಲ ಮಂದಿರದಲ್ಲಿ ನಾಮದೇವ ಹಾಗೂ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಂತಶಿರೋಮಣಿ ನಾಮದೇವ ಮಹಾರಾಜರ 673ನೇ ಸಮಾಧಿ ಸೋಹಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂತಶಿರೋಮಣಿ ನಾಮದೇವ ಮಹಾರಾಜರು 6 ಶತಮಾನಗಳ ಹಿಂದೆ ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿದ್ದಾರೆ. ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಶ್ರಮಿಸಿದ್ದಾರೆ. ಅನಕ್ಷರಸ್ಥರೇ ಹೆಚ್ಚಿರುವ ಕಾಲದಲ್ಲಿ ಸಮಾಜದಲ್ಲಿ ಅರ್ಪಣೆ ಮನೋಭಾವ ಬೆಳೆಸಿಕೊಂಡು, ಎಲ್ಲರ ಒಳಿತಿಗಾಗಿ ಶ್ರಮಿಸಿದ್ದರು. ಪ್ರತಿವರ್ಷ ಅವರ ಹೆಸರಿನಲ್ಲಿ ಉತ್ಸವ ಆಚರಣೆ ಮಾಡಿ ಅವರ ಆದರ್ಶ ಗುಣಗಳನ್ನು ಪಾಲಿಸೋಣ ಎಂದರು. ಗಣೇಶ ಅಚಲಕರ, ಸರೋಜಾ ಅಚಲಕರ, ಶಶಿಕಲಾ ನವಲೆ, ಸರಸ್ವತಿ ಉರಣಕರ, ಮಂಜುಳಾ ಉರಣಕರ, ಉಮಾ ನವಲೆ, ಉಮಾ ಪೇಟ್ಕರ, ಎನ್.ಎಂ. ಚೌಧರಿ, ಪ್ರದೀಪ ಖಟಾವಕರ್, ನಾಗಪ್ಪ ಉರಣಕರ, ಸಚಿನ್ ಚೌಧರಿ, ಶಂಕರ ಜಿಂಗಾಡೆ, ಪುಂಡಲೀಕ ನವಲೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts