

ಪಡುಬಿದ್ರಿ: ಬಂಟರ ಸಂಘದಲ್ಲಿ ನೂತನವಾಗಿ ಆರಂಭಗೊಂಡ ಪಡುಬಿದ್ರಿ ಸಿರಿಮುಡಿ ಕ್ರೆಡಿಟ್ ಕೋ-ಆಪರೇಟಿವ್ ಸಂಘ ಆಡಳಿತ ಮಂಡಳಿ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ದೇವಿಪ್ರಸಾದ್ ಶೆಟ್ಟಿ ಬೆಳಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಶ್ರೀನಾಥ ಹೆಗ್ಡೆ ನಡ್ಸಾಲುಗುತ್ತು, ನಿರ್ದೇಶಕರಾಗಿ ರವೀಂದ್ರನಾಥ್ ಜಿ.ಹೆಗ್ಡೆ, ಎರ್ಮಾಳು ಶಶಿಧರ ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಗುಂಡ್ಲಾಡಿ ಸುರೇಶ್ ಶೆಟ್ಟಿ, ನವೀನಚಂದ್ರ ಜೆ.ಶೆಟ್ಟಿ, ಸಂತೋಷ್ ಶೆಟ್ಟಿ ಪಲ್ಲವಿ, ಮಾಧವ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ರವಿ ಶೆಟ್ಟಿ ಗುಂಡ್ಲಾಡಿ, ಸಂತೃಪ್ತಿ ಶೆಟ್ಟಿ, ಶೋಭಾ ಜಿ.ಶೆಟ್ಟಿ ಆಯ್ಕೆಯಾಗಿದ್ದಾರೆ.