ಹೆಬ್ರಿ: ಬೆಂಗಳೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಶಿಕ್ಷಕರ ತಂಡದ ಬರ್ಬರಿಕ ನಾಟಕ ಪ್ರಥಮ ಸ್ಥಾನ ಪಡೆದು 2ನೇ ಬಾರಿಗೆ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಗೆ ಆಯ್ಕೆಯಾಗಿದೆ.
ಬರ್ಬರಿಕ ನಾಟಕಕ್ಕೆ ರಂಗ ಗುರು ರಾಮ್ ಶೆಟ್ಟಿ ಹಾರಾಡಿ ರಂಗ ನಿರ್ದೇಶನ ಮತ್ತು ವಿನ್ಯಾಸ, ಬೆಳಕು ನೀಡಿದ್ದಾರೆ. ವಸ್ತ್ರ ವಿನ್ಯಾಸ ಮತ್ತು ವರ್ಣಾಲಂಕಾರವನ್ನು ರಮೇಶ ಕಪಿಲೇಶ್ವರ ನೀಡಿದ್ದಾರೆ. ವಿಜಯ ಕುಮಾರ್ ಕುಂಭಾಶಿ ಸಂಗೀತ ರಚನೆ ಮಾಡಿದ್ದು ದಿವಾಕರ್ ಕಟೀಲ್ ಸಂಗೀತ ನೀಡಿದ್ದಾರೆ. ರವಿ ಎಸ್.ಪೂಜಾರಿ ಬೈಕಾಡಿಯವರ ನಾಯಕತ್ವದ ತಂಡದಲ್ಲಿ ರಂಗಕಲಾವಿದರಾದ ದಿನೇಶ್ ಶೆಟ್ಟಿ, ಲಕ್ಷ್ಮೀನಾರಾಯಣ ಪೈ, ವನಿತಾ ಶೆಟ್ಟಿ, ನಾಗರತ್ಮ, ಸದಾಶಿವ ಕೆಂಚನೂರು, ಸುರೇಂದ್ರ ಕೋಟ, ಸತೀಶ್ ಬೇಳಂಜೆ, ರವೀಂದ್ರ ಶೆಟ್ಟಿ, ಹರೀಶ್ ಪೂಜಾರಿ.ಎಸ್ ಇದ್ದಾರೆ.