ಬೆನಕನಹಳ್ಳಿ ಕರಿಯಮ್ಮ ದೇವಿ ಜಾತ್ರೆ 21ರಿಂದ

hnl jatre
Published on

ಹೊನ್ನಾಳಿ: ಇಪ್ಪತ್ತೊಂದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಜ.21 ರಿಂದ 24ರ ವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಬೆನಕನಹಳ್ಳಿ ಗ್ರಾಮದ ಮುಖಂಡರು ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.21ರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಗ್ರಾಮದ ರಾಜಬೀದಿಗಳಲ್ಲಿ ಸಕಲ ಮಂಗಳವಾದ್ಯಗಳೊಂದಿಗೆ ಕರಿಯಮ್ಮದೇವಿ ಉತ್ಸವ ಹಾಗೂ ಅಮ್ಮನಕಟ್ಟೆ ಸ್ಥಳದಲ್ಲಿ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದರು.

ಜ.22ರ ಬೆಳಗ್ಗೆ 3 ರಿಂದ 4.30ರ ವರೆಗೆ ಕರಿಯಮ್ಮ ದೇವಿಗೆ ಧಾರ್ವಿುಕ ವಿಧಿವಿಧಾನ, ಜ.23ರ ಸಂಜೆ ಹಾಸ್ಯ ಕಾರ್ಯಕ್ರಮ, ಜ.24 ರಂದು ಹುಲಸಿನಕಾಳು ಹಂಚುವ ಕಾರ್ಯಕ್ರಮ ನಡೆಯಲಿದೆ ಎಂದರು.

ಮುಖಂಡರಾದ ಎ.ಜಿ. ಮಹೇಂದ್ರಗೌಡ, ಬಸವನಗೌಡ್ರು, ಎಚ್.ಜಿ. ನಾಗರಾಜ್, ಎಚ್.ಬಿ. ಗಣೇಶ್, ಟಿ.ಜಿ. ಬೆನಕೇಶ್, ಟಿ. ಮಂಜಪ್ಪ, ಎ.ಕೆ. ಕಾಂತರಾಜ್, ಎ.ಕೆ. ಪರಮೇಶ್, ಚಂದ್ರಶೇಖರ್, ಬೆನಕೇಶ್, ಎಚ್.ಜಿ. ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net