ದೇವಿ ಅವತಾರಗಳ ಅನಾವರಣ

04-10-ಗೊರೇಬಾಳ-01
ಗೊರೇಬಾಳ ಸಮೀಪದ ಅಂಬಾನಗರ ಕ್ಯಾಂಪನ ಕಾಳಿಕಾದೇವಿ ದೇವಾಲಯದಲ್ಲಿ ಪುರಾಣ ಪ್ರವಚನ ನಡೆಯಿತು. ಪ್ರವಚನಕಾರರಾದ ಶರಣಯ್ಯಸ್ವಾಮಿ, ಹಾರ್ಮೋನಿಯಂ ಕಲಾವಿದ ನರಸಪ್ಪ ಆಚಾರ ಗೊರೇಬಾಳ, ದೇವೇಂದ್ರ ಇದ್ದರು.
Published on

ಗೊರೇಬಾಳ: ಚಿದಾನಂದ ಅವಧೂತ ವಿರಚಿತ ದೇವಿ ಪುರಾಣ ಸರ್ವ ಶ್ರೇಷ್ಠವಾಗಿದೆ. ಪುರಾತನ ಕಾಲದಿಂದಲೂ ದೇವಿ ಆರಾಧನೆ ಹಾಗೂ ಪುರಾಣ ಆಲಿಸಿದ ಭಕ್ತರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಪುರಾಣ ಪ್ರವಚನಕಾರ ಶರಣಯ್ಯ ಸ್ವಾಮಿ ಹೇಳಿದರು.

ಅಂಬಾನಗರ ಕ್ಯಾಂಪನ ಕಾಳಿಕಾ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ದೇವಿ ಪುರಾಣಕ್ಕೆ ಚಾಲನೆ ನೀಡಿ ಮಾತನಾಡಿದರು. ದೇವಿ ಅವತಾರಗಳನ್ನು ಚಿದಾನಂದ ಅವಧೂತರು ಅವರ ಬರವಣಿಗೆಯಿಂದ ಮನಮುಟ್ಟುವಂತೆ ಅನಾವರಣಗೊಳಿಸಿದ್ದಾರೆ ಎಂದರು. ದೇವೇಂದ್ರ ವಿಶ್ವಕರ್ಮ ಹಾರ್ಮೋನಿಯಮ್ ಸಾಥ್ ನೀಡಿದರು.

ಪ್ರಮುಖರಾದ ಅಳ್ಳಮ್ಮ ಹಚ್ಚೊಳ್ಳಿ, ಅಮರಪ್ಪ ವಿಶ್ವಕರ್ಮ, ಎನ್.ವೀರೇಶ ಗೌಡ, ಎಚ್.ಚನ್ನಬಸವನಗೌಡ, ಅಮರಪ್ಪ ವಿಶ್ವಕರ್ಮ, ಸೋಮೇಶ, ಎನ್.ಷಣ್ಮುಖ ಗೌಡ, ಎನ್.ವಿಶ್ವನಾಥ, ಶರಣೇಗೌಡ ಪೊ.ಪಾ., ಕಪಡಿ ಬಸವನಗೌಡ, ಆರ್.ಮಹೇಶ್ ಗೌಡ, ಎಚ್.ಶರಣೇಗೌಡ, ಪಂಪಯ್ಯಸ್ವಾಮಿ, ಸರಸಮ್ಮ ಕನ್ನಾರಿ, ಸೋಮನಗೌಡ ಇಂಗಳಗಿ, ಪಾಲಾಕ್ಷಯ್ಯ ಸ್ವಾಮಿ, ಸುಬ್ಬಣ್ಣನವರ ಸುರೇಶ್ ಗೌಡ, ಗಡ್ಡದ ಅಮರೇಶ, ಎಚ್.ಚನ್ನಬಸವನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net