ಭೀಮಕವಿಯ ಬಸವ ಪುರಾಣ ನ.25ರಿಂದ

02 GJD
Published on

ಗಜೇಂದ್ರಗಡ: ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ನ.25ರಿಂದ ಡಿ.26ರವರೆಗೆ ಭೀಮಕವಿ ರಚಿಸಿದ ಬಸವ ಪುರಾಣ ಕಾರ್ಯಕ್ರಮ ಏರ್ಪಾಟಾಗಿದೆ ಎಂದು ಹಾಲಕೆರೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಜರುಗಿದ ಬಸವ ಪುರಾಣದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
12 ಬಸವ ಪುರಾಣ ಕಾರ್ಯಕ್ರಮಗಳು ನಾಡಿನ ನಾನಾ ಕಡೆ ಜರುಗಿವೆ. 13ನೇ ಬಸವ ಪುರಾಣ ಶಾಂತಿ, ಸೌಹಾರ್ದದಿಂದ ಕೂಡಿರುವ ಗಜೇಂದ್ರಗಡ ಪಟ್ಟಣದಲ್ಲಿ ಮಾಡಬೇಕೆಂದಿದ್ದೇವೆ. ಗೂಡೂರಿನ ಅನ್ನದಾನೇಶ್ವರ ಶಾಸ್ತ್ರಿಗಳು ಪ್ರವಚನ ನೀಡಲಿದ್ದಾರೆ. ಹಾಲಕೆರೆ 28 ಶಾಖಾಮಠಗಳ ಭಕ್ತರು ಹಾಗೂ ನಾಡಿನ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾರ್ಯಕ್ರಮ ನಿಮಿತ್ತ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ವ್ಯಸನ ಭಿಕ್ಷೆ ಜರುಗುವುದು. ಬಸವ ಪುರಾಣಕ್ಕೆ ವಿವಿಧ ಸಮಿತಿ ರಚನೆ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಬೇಕು ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಅಭಿನವ ಅನ್ನದಾನ ಸ್ವಾಮೀಜಿಗಳ ಅಪೇಕ್ಷೆ ಮೇರೆಗೆ ಬಸವ ಪುರಾಣವನ್ನು ಗಜೇಂದ್ರಗಡದಲ್ಲಿ ಆಯೋಜಿಸಿರುವುದು ನಮ್ಮ ಪುಣ್ಯ. ಪೂರ್ವಭಾವಿ ಸಭೆಗೆ 80 ಊರುಗಳ ಭಕ್ತರು ಬಂದಿರುವುದು ಖುಷಿ ವಿಚಾರ. ಪುರಾಣ, ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಹೆಚ್ಚು ಭಕ್ತರನ್ನು ಕರೆತರಬೇಕು ಎಂದರು.
ಗೂಡೂರಿನ ಅನ್ನದಾನೇಶ್ವರ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಗನಹಾಲ ಹಾಲಕೆರೆ ಶಾಖಾಮಠದ ವಿಶ್ವೇಶ್ವರಯ್ಯ ದೇವರು, ಗಜೇಂದ್ರಗಡ- ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಕಸಾಪ ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ, ಪುರಸಭೆ ಸದಸ್ಯರಾದ ಮುರ್ತುಜಾ ಡಾಲಾಯತ, ರಾಜು ಸಾಂಗ್ಲಿಕರ, ಪ್ರಭು ಚವಡಿ, ಬಸವರಾಜ ಕೊಟಗಿ, ವಿ.ಬಿ. ಸೋಮನಕಟ್ಟಿಮಠ, ಬಸವರಾಜ ಮೂಲಿಮನಿ, ನಾಗಯ್ಯ ಗೊಂಗಡಶೆಟ್ಟಿಮಠ, ಬಸವರಾಜ ಚನ್ನಿ, ಬಸವರಾಜ ರೇವಡಿ, ವಸಂತರಾವ್ ಗಾರಗಿ, ಸಿದ್ದು ಗೊಂಗಡಶೆಟ್ಟಿಮಠ, ಕಳಕಯ್ಯ ಸಾಲಿಮಠ, ಪ್ರಭು ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net