ಭಾಷೆಗಳ ಬಳಕೆಯಿಂದ ಅಭಿವೃದ್ಧಿ: ರಾಯಿ ರಾಜಕುಮಾರ್ ಅಭಿಮತ

Mbd_Development
Published on

ಮೂಡುಬಿದಿರೆ: ಎಲ್ಲ ಭಾಷೆಯೂ ನಮಗೆ ಉಪಯೋಗಿಯಾಗಿರುತ್ತದೆ. ಇಂಗ್ಲಿಷ್, ಹಿಂದಿ, ಕನ್ನಡ ಯಾವುದೇ ಭಾಷೆ ಆಗಲಿ. ಅವುಗಳನ್ನು ಬಳಸಿಕೊಂಡು ನಮ್ಮನು ನಾವು ಬೆಳಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಮೂಡುಬಿದಿರೆ ಜೈನ್ ಪ್ರೌಢಶಾಲೆ ನಿವೃತ್ತ ಹಿಂದಿ ಶಿಕ್ಷಕ ರಾಯಿ ರಾಜಕುಮಾರ್ ಹೇಳಿದರು.

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಿಂದಿ ವಿಭಾಗದ ವತಿಯಿಂದ ಆಯೋಜಿಸಲಾದ ಉಮಂಗ್ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಮಂಗ್ ಎಂದರೆ ಖುಷಿ, ಆನಂದ, ಉಲ್ಲಾಸ, ಅತ್ಯುತ್ಸಾಹ. ಇಂಥ ಕಾರ್ಯಕ್ರಮದ ಅವಶ್ಯಕತೆ ಇದೆ, ಸುಖದ ಅನುಭವ ಎಲ್ಲರಿಗೂ ಸಿಗಬೇಕು ಅದುವೇ ಉಮಂಗ್ ಎಂದರು.

ಝೆಂಕೊ.ಐಒ ಸಂಸ್ಥೆ ಸಿಇಒ ಡಿಂಪಲ್ ಪರ್ಮಾರ್ ಮಾತನಾಡಿ, ಹಿಂದಿ ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ಸಾಂಸ್ಕೃತಿಕ ಗುರುತು ಹಾಗೂ ಘನತೆಯಾಗಿದೆ. ಭಾಷೆಯೊಂದಿಗೆ ಅಭಿವೃದ್ಧಿ ಹೊಂದುವ ದೇಶ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ ಎಂದರು.

ಆಳ್ವಾಸ್ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಎನ್.ಪಿ. ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಹಿಂದಿ ವಿಭಾಗದ ಸಂಯೋಜಕ ಡಾ. ದತ್ತಾತ್ರೇಯ ಹೆಗ್ಡೆ, ಹಿರಿಯ ವಿದ್ಯಾರ್ಥಿಗಳಾದ ತನೀಷಾ, ಸ್ಪರ್ಶ, ವಿದ್ಯಾರ್ಥಿ ಸಂಯೋಜಕರಾದ ಖುಷಿ ಕುಡಾಲ್ಕರ್ ಮತ್ತು ಜೊನಾಥನ್ ಡಿಸೋಜ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ, ಸೈಂಟ್ ಅಲೋಶಿಯಸ್ ಡೀಮ್ಡ್ ವಿವಿಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು. ವಿನೆಟ್ ವಾಸ್, ವೃದ್ಧಿ ರೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net