ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ

Kin_education
Published on

ವಿಜಯವಾಣಿ ಸುದ್ದಿಜಾಲ ಕಟೀಲು

ಶಿಕ್ಷಣ ಮತ್ತು ಸಂಘಟನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ನಾರಾಯಣಗುರುಗಳ ತತ್ವ, ಆದರ್ಶ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವದೊಂದಿಗೆ ಸಮಾಜಮುಖಿಯಾಗೋಣ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕಟೀಲು ಬಿಲ್ಲವ ಸಮಾಜ ಸೇವಾ ಸಂಘ ನಿರ್ಮಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಮಂದಿರದ ಲೋಕಾರ್ಪಣೆ, ಬಿಂಬ ಪ್ರತಿಷ್ಠಾಪನೆ, ಕುಂಭಾಭಿಷೇಕ ಸಂದರ್ಭ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಸಮಾಜ, ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ. ವಿದ್ಯೆಯಿಂದ ಎಲ್ಲರೂ ಸದೃಢರಾಗೋಣ ಎಂದರು.

ಕುದ್ರೋಳಿ ದೇಗುಲ ಸಮಿತಿಯ ಎಚ್.ಸಾಯಿರಾಂ, ಮಿತ್ತಬೈಲು ಶೇಖರ ಪೂಜಾರಿ, ಪಕ್ಷಿಕೆರೆ ಶೀನ ಸ್ವಾಮಿ, ಮಾಜಿ ಸಚಿವ ಅಭಯಚಂದ್ರ ಜೈನ್, ಬಿಲ್ಲವ ಮಹಾಮಂಡಲದ ರಾಜಶೇಖರ ಕೋಟ್ಯಾನ್, ಉದ್ಯಮಿ ಗಿರೀಶ್ ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ಕಸ್ತೂರಿ ಪಂಜ, ಕುಶಲ ಪೂಜಾರಿ, ಗೋಪಾಲ್ ಪೂಜಾರಿ ಗುತ್ತಕಾಡು, ಅರುಣ್ ಕುಮಾರ್, ಕಟೀಲು ಬಿಲ್ಲವ ಸಂಘ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಉದಯ ಪೂಜಾರಿ, ತಿಮ್ಮಪ್ಪ ಕೋಟ್ಯಾನ್, ಸಮಿತಿ ಗೌರವಾಧ್ಯಕ್ಷ ಈಶ್ವರ ಕಟೀಲು, ನೀಲಯ್ಯ ಕೋಟ್ಯಾನ್, ಸೀತಾರಾಮ್ ಮಂಗಳೂರು, ಸಮಿತಿಯ ಲೋಕಯ್ಯ ಸಾಲ್ಯಾನ್ ಮತ್ತಿತರರಿದ್ದರು.

ಈ ಸಂದರ್ಭ ಗುರು ಮಂದಿರಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಮಂದಿರ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ದಯಾನಂದ ಕಟೀಲು ಸ್ವಾಗತಿಸಿದರು. ರಾಜೇಂದ್ರ ಎಕ್ಕಾರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net