ಆಟಿಸಂ ಸೆಕ್ಟ್ರಂ ಡಿಸಾರ್ಡರ್ ಪತ್ತೆ ಮಾಡುವ ಯಂತ್ರ ಅಭಿವೃದ್ಧಿ

blm-5
Published on

ಶಿರ್ವ: ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಆಟಿಸಂ ಸೆಕ್ಟ್ರಂ ಡಿಸಾರ್ಡರ್ ಕಾಯಿಲೆಯನ್ನು ಯಂತ್ರ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಂಡು ಪತ್ತೆ ಮಾಡುವ ಯಂತ್ರವನ್ನು ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಕಾಲೇಜಿನ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ರಮ್ಯಾ, ಶರಣ್ಯಾ, ಶ್ರೀಯಾ ಶೆಟ್ಟಿ ಮತ್ತು ವೈಷ್ಣವಿ ಬಿಜೂರ್ ಇವರು ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಸವಿತಾ ಶೆಣೈ ಮಾರ್ಗದರ್ಶನದಲ್ಲಿ ಈ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಆಟಿಸಂ ಸೆಕ್ಟ್ರಂ ಡಿಸಾರ್ಡರ್ ಎಂಬುದು ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆಯಾಗಿದ್ದು ಅದು ಮಗುವಿನ ನಡವಳಿಕೆ ಮತ್ತು ಸಾಮಾಜಿಕ ಸಂವಹನಗಳ ಮೇಲೆ ಪರಿಣಾಮ ಬೀರುತ್ತದೆ. ಈ ಯಂತ್ರದ ಮೂಲಕ ತಾಂತ್ರಿಕ ಅಧ್ಯಯನ ತಂತ್ರಗಳನ್ನು ಬಳಸಿಕೊಂಡು ಚಿಕ್ಕ ಮಕ್ಕಳಲ್ಲಿ ಮೊದಲ ಹಂತದ ಆಟಿಸಂ ಸೆಕ್ಟ್ರಮ್ ಡಿಸಾರ್ಡರ್‌ನಂತಹ ಕಾಯಿಲೆಯನ್ನು ಪತ್ತೆ ಹಚ್ಚಿ ಸುಧಾರಿತ ಚಿಕಿತ್ಸೆ ನೀಡುವಲ್ಲಿ ಸಹಾಯಕವಾಗಿದೆ.

ಈ ಯೋಜನೆಯಿಂದ ಆಟಿಸಂ ಸೆಕ್ಟ್ರಂ ಡಿಸಾರ್ಡರ್ ಕಾಯಿಲೆಯನ್ನು ಪತ್ತೆ ಹಚ್ಚಲು ಲಾಸೋ ಎಂಬ ತಂತ್ರಜ್ಞಾನಗಳನ್ನು ಬಳಸಿ ನಂತರ ಎಕ್ಸ್‌ಜಿ ಬೂಸ್ಟ್, ರಾಂಡಮ್ ಫಾರೆಸ್ಟ್ ಮತ್ತು ಗ್ರೇಡಿಯಂಟ್ ಬೂಸ್ಟಿಂಗ್ ಮೂಲಕ ಕಾಯಿಲೆಯ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ತಂತ್ರಜ್ಞಾನವು ಒಟ್ಟಾರೆ ಶೇ.94.79 ನಿಖರತೆಯನ್ನು ಸಾಧಿಸುತ್ತದೆ. ಯಂತ್ರವು ಪಾಲಕರಿಗೆ ಮತ್ತು ಮಕ್ಕಳನ್ನು ಆರೈಕೆ ಮಾಡುವವರಿಗೆ ತುಂಬಾ ಸಹಾಯಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net