

ರಾಮನಗರ: ನಮಗೆ ಅಧಿಕಾರ ನೀಡಿರುವುದರಿಂದ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ಮೂಲಕ ಋಣ ತೀರಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವದ ಅಂಗವಾಗಿ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ರಾಜ್ ಇವೆಂಟ್ಸ್ ನಿರ್ವಹಣೆಯಲ್ಲಿ ರಾಜ್ಯದ ನಂ.1 ಕನ್ನಡ ದಿನ ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೀವೆಲ್ಲ ಸಂತೋಷವಾಗಿ ಇರಬೇಕೆಂದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ವರ್ಷದ ಕೊಡುಗೆ ಎಂದರೆ ನಾವೆಲ್ಲರೂ ಈಗ ಬೆಂಗಳೂರು ದಣ ಜಿಲ್ಲೆಯ ಮಕ್ಕಳು. ನೀವು ಕೊಟ್ಟ ಬಲದಿಂದ ಇಡೀ ವಿಶ್ವವೇ ನಿಮ್ಮ ಕಡೆಗೆ ನೋಡುವಂತೆ ಮಾಡಿದ್ದೇವೆ ಎಂದರು.
ನಿಮ್ಮ ಸಹಕಾರದಿಂದ ನಾಲ್ಕೂ ೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ರಾಮನಗರದಲ್ಲಿ 150 ಎಕರೆ ಜಮೀನು ಪಡೆದು ಬಡವರಿಗೆ ನಿವೇಶನ ಹಂಚಲು ಕ್ರಮವಹಿಸಲಾಗಿದೆ ಎಂದರು.
ಶಾಸಕ ಎಚ್.ಎ ಇಕ್ಬಾಲ್ ಹುಸೇನ್ ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಿಮ್ಮ ಶ್ರಮದ ಫಲವಾಗಿ ಈ ಜಿಲ್ಲೆಯ ಮನೆ ಮಕ್ಕಳು ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ರಾಮನಗರ ಮಾದರಿ ಕ್ಷೇತ್ರ ಮಾಡುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ನಮ್ಮ ನಾಯಕರಿಗೆ ಮತ್ತಷ್ಟು ಶಕ್ತಿ ನೀಡಬೇಕು, ನಮ್ಮ ನಾಯಕರಿಗೆ
ಸ್ಥಾನವನ್ನು ಈ ತಾಯಿ ಕೊಡಬೇಕು ಎಂದು ಕೋರಿದರು.
ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಮಾತನಾಡಿ, ಚಾಮುಂಡೇಶ್ವರಿ ತಾಯಿ ಡಿ.ಕೆ. ಶಿವಕುಮಾರ್ ಅವರನ್ನು ಆಶೀರ್ವದಿಸಲಿ. ಮಳೆ ಬೆಳೆ ಕರುಣಿಸಲಿ ಎಂದರು.
ವೇದಿಕೆಯಲ್ಲಿ ಕೊಡಗು ಶಾಸಕ ಮಂಥರ್ ಗೌಡ, ಬಮುಲ್ ಅಧ್ಯಕ್ಷ ಡಿ ಕೆ ಸುರೇಶ್, ನಟ ನಿರ್ದೇಶಕ ರವಿ ಚಂದ್ರನ್, ಮುಖಂಡರಾದ ನಟರಾಜ್, ಚೇತನ್ ಕುಮಾರ್, ವಿಜಯದೇವ್, ವಿಧಾನ ಪರಿಷತ್ ಸದಸ್ಯ ಎಸ್ ರವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ರಾಜು ಇತರರು ಇದ್ದರು.
ಅದ್ದೂರಿ ಕಾರ್ಯಕ್ರಮ: ಕಾರ್ಯಕ್ರಮದಲ್ಲಿ ತಾಳ್ಮೆಯಿಂದಲೇ ಕಾಯ್ದ ಜನರು ಪ್ರತಿ ಹಾಡು ನೃತ್ಯಕ್ಕೆ ಹಜ್ಜೆ ಹಾಕಿ ಕುಣಿದಾಡಿದರು.
ಬಿಗ್ ಬಾಸ್ ಖ್ಯಾತಿಯ ತನಿಷಾರ ಕುಪ್ಪಂಡ ನೃತ್ಯ, ರಾಗಿಣಿ ದ್ವಿವೇದಿ, ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ರು ದೀತ್, ರ್ಯಾಪರ್ ಚಂದನ್ ಶೆಟ್ಟಿ, ಅನುರಾಧ ಭಟ್ ಅವರ ಹಾಡುಗಳು ಇಡೀ ಕ್ರೀಡಾಂಗಣದಲ್ಲಿ ಜನತೆ ಸಂತಸದಿಂದ ಮೈಮರೆಯುವಂತೆ ಮಾಡಿತು. ಕಾರ್ಯಕ್ರಮದಲ್ಲಿ ಶಾಸಕ ಎಚ್ ಎ ಇಕ್ಬಾಲ್ ಹುಸೇನ್, ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ , ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ಮಾಜಿ ಶಾಸಕ ಸಿಎಂ ಲಿಂಗಪ್ಪ, ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಇದ್ದರು.