ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ

06ALD 01
ಅಳವಂಡಿ ಸಮೀಪದ ಬೂದಿಹಾಳ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹನುಮಂತಗೌಡ, ಉಪಾಧ್ಯಕ್ಷೆ ಲಕ್ಷ್ಮವ್ವ ರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸುಧಾಬಾಯಿ, ಷಣ್ಮುಖನಗೌಡ, ಶ್ರೀಧರ, ಶಂಕ್ರಪ್ಪ, ಸಿದ್ದಪ್ಪ, ಗಣೇಶ ಇತರರಿದ್ದರು.
Published on

ಅಳವಂಡಿ:ಸಹಕಾರ ಸಂಘಗಳು ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ನಿರ್ದೇಶಕರ ಹಾಗೂ ಸದಸ್ಯರ ಸಹಕಾರ ಮತ್ತು ಸೇವಾ ಮನೋಭಾವ ಅಗತ್ಯ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಹನುಮಂತಗೌಡ ಮಾಲಿಪಾಟೀಲ ತಿಳಿಸಿದರು.

ಸಮೀಪದ ಬೂದಿಹಾಳ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಸನ್ಮಾನ ಸ್ವೀಕರಿಸಿ ಮಂಗಳವಾರ ಮಾತನಾಡಿದರು.

ಎಲ್ಲರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುವೆ. ರೈತರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ನಿರಂತರ ಆದಾಯ ನೀಡಲಿದ್ದು ಆರ್ಥಿಕ ಸಬಲತೆ ಸಾಧ್ಯವಾಗಲಿದೆ. ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಿ ಎಂದರು.

ರಿಟರ್ನಿಂಗ್ ಆಫೀಸರ್ ಸುಧಾಭಾಯಿ ಚುನಾವಣಾ ಕಾರ್ಯ ನಡೆಸಿದರು. ಉಪಾಧ್ಯಕ್ಷೆ ಲಕ್ಷ್ಮವ್ವ ದೊಡ್ಡಮನಿ, ಪ್ರಮುಖರಾದ ಷಣ್ಮುಖನಗೌಡ ಮಾಲಿಪಾಟೀಲ, ಶ್ರೀಧರ ಕುರಿ, ಶಂಕ್ರಪ್ಪ ದೊಡ್ಡಮನಿ, ಹೇಮಪ್ಪ ದೊಡ್ಡಮನಿ, ವಾಸುದೇವ ಕುಲಕರ್ಣಿ,

ಯಂಕಪ್ಪ ಕೊಪ್ಪಳ, ಸೀಮಣ್ಣ, ನಿಂಗಪ್ಪ ಹಳೆಮನಿ, ಹೇಮಣ್ಣ ಹಳ್ಳಿ, ಈಶಪ್ಪ ವಾಲಿಕಾರ, ಲಿಂಗಜ್ಜ ಹಳ್ಳಿ, ಸಿದ್ದಪ್ಪ ಹಳೆಮನಿ, ಗಣೇಶ ಮತ್ತೂರ, ನಿಂಗನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net