ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿ

Published on

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಉತ್ತರ ಪಿನಾಕಿನಿ ಉಕ್ಕಿ ಹರಿಯುತ್ತಿರುವ ಹಿನ್ನಲೆಯಲ್ಲಿ ನಗರದ ಕಿಂಡಿ ಅಣೆಕಟ್ಟಿನ ಬಳಿ ನಗರಸಭೆಯಿಂದ ಬಾಗಿನ ಅರ್ಪಿಸಲಾಯಿತು.

ಶಾಸಕ ಕೆ.ಎಚ್​.ಪುಟ್ಟಸ್ವಾಮಿಗೌಡ ಮಾತನಾಡಿ, ಉತ್ತರ ಪಿನಾಕಿನಿ ಮಳೆಗಾಲದಲ್ಲಿ ಜೀವ ಕಳೆ ಪಡೆದುಕೊಳ್ಳುವ ನದಿಯಾಗಿದೆ.ನಂದಿ ಬೆಟ್ಟದ ಸಾಲುಗಳಲ್ಲಿ ಬೀಳುತ್ತಿರುವ ಮಳೆಯಿಂದಾಗಿ ನದಿ ತುಂಬಿ ಹರಿಯಲಾರಂಭಿಸಿದೆ. ಆದರೆ ಈ ಭಾಗದಲ್ಲಿ ಯಾವುದೇ ಶಾಶ್ವತ ನದಿ ನಾಲೆಗಳಿಲ್ಲ. ಆದ್ದರಿಂದ ಎತ್ತಿನಹೊಳೆ ನೀರನ್ನು ಬಯಲು ಸೀಮೆಗೆ ಹರಿಸಲೇಬೇಕು ಎಂದು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಆ ಯೋಜನೆಯ ನೀರು ಬಂದ ಮೇಲೆ ಈ ಭಾಗ ಸಸ್ಯ ಶಾಮಲೆಯಾಗಲಿದೆ. ಎಲ್ಲ ಕಡೆ ಅಂತರ್ಜಲಮಟ್ಟ ವೃದ್ಧಿಯಾಗುವುದರಿಂದ ಕೃಷಿಕರಿಗೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಸಿಗಲಿದೆ. ತಾಲೂಕು ಅಭಿವೃದ್ಧಿ ಮುಖಿಯಾಗಿ ಸಾಗುತ್ತಿದೆ. ಹೊಸ ಹೊಸ ಕೈಗಾರಿಕೆಗಳು ಬರುತ್ತಿವೆ. ಜನ ಸಂಖ್ಯೆ ಹೆಚ್ಚಾಗಲಿದೆ. ಆದ್ದರಿಂದ ಬೆಳವಣಿಗೆಗೆ ತಕ್ಕಂತೆ ನಾವು ಸಾಗಬೇಕಿದೆ. ಎರಡೂವರೆ ವರ್ಷಗಳಲ್ಲಿ ಎಲ್ಲ ಕೆರೆಗಳನ್ನು ತುಂಬುವ ಕೆಲಸ ಮಾಡಲಾಗುವುದು ಎಂದರು. ನಗರಸಭೆ ಅಧ್ಯಕ್ಷ ಲಕ್ಷಿ$್ಮನಾರಾಯಣಪ್ಪ ಮಾತನಾಡಿ, ಪೂರ್ವಿಕರು ನಿರ್ಮಿಸಿರುವ ಸಾಂಪ್ರದಾಯಿಕ ಜಲ ಮೂಲಗಳಾದ ಕೆರೆ, ಕುಂಟೆ, ಕಟ್ಟೆಗಳನ್ನು ರಸಿಕೊಂಡು ಹೋಗಬೇಕು.ಇಲ್ಲವಾದಲ್ಲಿ ಮುಂದಿನ ಪೀಳಿಗೆ ತೊಂದರೆ ಅನುಭವಿಸಬೇಕಾಗುತ್ತದೆ. ಭೂಮಿ ಬರಡಾದರೆ ಬದುಕುವುದು ಕಷ್ಟವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net