ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಿ

SND NEWS
ಸಿಂಧನೂರಿನ ಬಪ್ಪೂರ ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಉಚಿತ ಚೆಸ್ ತರಬೇತಿ ಶಿಬಿರವನ್ನು ಕನ್ನಿಕಾ ಪರಮೇಶ್ವರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಎಚ್.ವೆಂಕಟೇಶ ಶ್ರೇಷ್ಠಿ ಉದ್ಘಾಟಿಸಿದರು. ಅಶ್ರಮದ ಸ್ಥಳ ದಾನಿ ಕೆ.ರಾಜಶೇಖರ ರೆಡ್ಡಿ, ತರಬೇತುದಾರ ಲಕ್ಷ್ಮಯ್ಯ ಶೆಟ್ಟಿ, ಡಾ. ಚೆನ್ನನಗೌಡ ಆರ್.ಪಾಟೀಲ್ ಇದ್ದರು.
Published on

ಸಿಂಧನೂರು: ನಾವು ಯಾವುದೇ ಕೆಲಸ, ಆಟದಲ್ಲಿ ತೊಡಗಿರಲಿ ಅದನ್ನು ಎದುರಿಸುವ ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು ಎಂದು ಕನ್ನಕಾ ಪರಮೇಶ್ವರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಎಚ್.ವೆಂಕಟೇಶ ಶ್ರೇಷ್ಠಿ ಹೇಳಿದರು.

ನಗರದ ಬಪ್ಪೂರ ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ 15 ದಿನಗಳ ವರೆಗೆ ಉಚಿತ ಚೆಸ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಬರುವ ಹಲವಾರು ಸಮಸ್ಯೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸುವುದು ಅಗತ್ಯವಿದೆ. ಜತೆಗೆ ಸ್ಪರ್ಧಿಸುವ ಮನೋಭಾವವು ಬೆಳೆಸಿಕೊಳ್ಳಬೇಕೆಂದು. ಮನಸ್ಸಿನ ಏಕಾಗ್ರತೆ ಹಾಗೂ ಚುರುಕುತನ ಮೂಡಲು ಚೆಸ್ ಆಟ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಅಶ್ರಮದ ಸ್ಥಳ ದಾನಿ ಕೆ.ರಾಜಶೇಖರ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಹಾವಳಿಯಿಂದ ಹೊರ ಬರಲು ಚದುರಂಗ ಆಟ ಉಪಯುಕ್ತವಾಗಿದೆ ಎಂದರು.

ತರಬೇತುದಾರ ಲಕ್ಷ್ಮಯ್ಯ ಶೆಟ್ಟಿ, ಡಾ. ಚೆನ್ನನಗೌಡ ಆರ್.ಪಾಟೀಲ್, ಚದುರಂಗ ಆಟದ ಮಹತ್ವ ಕುರಿತು ಮಾತನಾಡಿದರು. ಆಶ್ರಮದ ಅಧ್ಯಕ್ಷ ಶ್ರೀ ಸದಾನಂದ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಸುಮಾರು 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕ ಕಳಕಪ್ಪ ಗಡಾದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net