

ಅರಸೀಕೆರೆ ಗ್ರಾಮಾಂತರ: ಹೋಬಳಿಯ ಟಿ.ಕೋಡಿಹಳ್ಳಿ ಗ್ರಾಮದೇವತೆ ದೇವಮ್ಮ ದೇವಿಯ ಜಾತ್ರಾ ಮಹೋತ್ಸವ ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು.
ಬಾಯಿಬೀಗ, ಸೂರ್ಯಮಂಡಲ ಉತ್ಸವ, ಶ್ರೀ ದೂತರಾಯನ ಕತ್ತಿ ಮೇಲೆ ಹಗಲು ಸೇವೆ ಇತ್ಯಾದಿ ಕಾರ್ಯಕ್ರಮಗಳು ನಡೆದವ
ಟಿ.ಕೋಡಿಹಳ್ಳಿ, ಕೊಪ್ಪಲು, ಜ್ಯೋತಿ ಮಲ್ಲಾಪುರ, ಬಾಳೇನಹಳ್ಳಿ, ಮಲ್ಲೇನಹಳ್ಳಿ, ತೊಳಲುತೋರೆ, ಸಂಗಯ್ಯನಪಾಳ್ಯ ಕಾಳೇನಹಳ್ಳಿಹಟ್ಟಿ, ತುಂಡೇರಿಹಟ್ಟಿ, ರಂಗನಾಥಪುರ ವೀರಾಪುರ ಗ್ರಾಮದ ಭಕ್ತರು ಪಾಲ್ಗೊಂಡು ದೇವಿಯ ನಾಮಸ್ಮರಣೆ ಮಾಡುತ್ತಾ ರಥ ಎಳೆದರು.
ನೂತನ ರಥ ಉದ್ಘಾಟನೆ: ಸುಮಾರು 21 ಅಡಿ ಎತ್ತರದ ನೂತನ ರಥವನ್ನು ಶಿಲ್ಪಿ ಗಂಗಾಧರ ಭಟ್ ಮುರುಡೇಶ್ವರ ಅವರು ಶಿಲ್ಪಶಾಸ್ತ್ರದ ಆಧಾರದ ಮೇಲೆ ನಿರ್ಮಿಸಿದ್ದಾರೆ.
ರಾಮಾಯಣ, ಮಹಾಭಾರತದ ಚಿತ್ರ ಕೆತ್ತನೆ, ನವಗ್ರಹ, ಆನೆ, ಕುದುರೆ, ಹುಲಿ, ಸಿಂಹಗಳನ್ನು ಕೆತ್ತಿ ರಥವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ರಥದ ಗಾಲಿಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಗ್ರಾಮದ ದೇವರಾದ ದೇವಮ್ಮ, ಬನ್ನಿಕಾಳಮ್ಮ, ದೂತರಾಯನಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ಸಾವಿರಾರು ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.