ಏಳು ಕಡೆ ಆಟೋ ನಿಲ್ದಾಣ ನಿರ್ಮಿಸಿ, ಕಲ್ಯಾಣ ಕರ್ನಾಟಕ ಶಂಕರನಾಗ್ ಆಟೋ ಚಾಲಕರು, ಮಾಲೀಕರ ಸಂಘ ಒತ್ತಾಯ

AUTO
ದೇವದುರ್ಗದಲ್ಲಿ ಆಟೋ ನಿಲ್ದಾಣ ಸ್ಥಾಪಿಸಲು ಒತ್ತಾಯಿಸಿ ಶಾಸಕಿ ಕರೆಮ್ಮ ಜಿ.ನಾಯಕಗೆ ಆಟೋ ಚಾಲಕರು, ಮಾಲೀಕರ ಸಂಘ ಮನವಿ ಸಲ್ಲಿಸಿತು. ತಾಲೂಕು ಗೌರವಾಧ್ಯಕ್ಷ ಹನುಮಯ್ಯ ನಾಡದಾಳ, ಅಧ್ಯಕ್ಷ ರಫಿ, ರಂಗಪ್ಪ ಕೋತಿಗುಡ್ಡ, ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರ, ಭೀಮರಾಯ ಭಂಡಾರಿ ಇತರರಿದ್ದರು.
Published on

ದೇವದುರ್ಗ: ಪಟ್ಟಣದ ವಿವಿಧೆಡೆ ಆಟೋ ಚಾಲಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಏಳು ಕಡೆ ಆಟೋ ನಿಲ್ದಾಣ ಸ್ಥಾಪನೆಗೆ ಒತ್ತಾಯಿಸಿ ಶಾಸಕಿ ಕರೆಮ್ಮ ಜಿ.ನಾಯಕಗೆ ಕಲ್ಯಾಣ ಕರ್ನಾಟಕ ಶಂಕರನಾಗ್ ಆಟೋ ಚಾಲಕರು, ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ಇತ್ತೀಚೆಗೆ ಮನವಿ ಸಲ್ಲಿಸಿದವು.

ಪಟ್ಟಣ ದಿನೇದಿನೆ ಬೆಳೆಯುತ್ತಿದ್ದು ಜನಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಆಟೋಗಳ ಸಂಖ್ಯೆ ಕೂಡ ವೃದ್ಧಿಯಾಗುತ್ತಿದ್ದು 300 ಕುಟುಂಬಗಳು ಆಟೋ ದುಡಿಮೆ ನಂಬಿಕೊಂಡು ಜೀವನ ನಡೆಸುತ್ತಿವೆ. ಆದರೆ ಚಾಲಕರಿಗೆ ಸೂಕ್ತ ನಿಲ್ದಾಣ ಇಲ್ಲದೆ ರಸ್ತೆ ಅಕ್ಕಪಕ್ಕ, ವೃತ್ತಗಳಲ್ಲಿ ನಿಂತು ಪ್ರಯಾಣಿಕರಿಗೆ ಕಾಯುವ ಸ್ಥಿತಿಯಿದೆ.

ದರಿಂದ ಪ್ರಯಾಣಿಕರು ಹಾಗೂ ಆಟೋ ಚಾಲಕರು ಇಬ್ಬರಿಗೂ ತೊಂದರೆಯಾಗಲಿದೆ. ಕೂಡಲೇ ಜಹಿರುದ್ದೀನ್ ಪಾಷಾ ಸರ್ಕಲ್, ಬಸವೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತ, ಮಿನಿವಿಧಾನಸೌಧ ಮುಂಭಾಗ, ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆಟೋ ನಿಲ್ದಾಣ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಗೌರವಾಧ್ಯಕ್ಷ ಹನುಮಯ್ಯ ನಾಡದಾಳ, ಅಧ್ಯಕ್ಷ ರಫಿ, ರಂಗಪ್ಪ ಕೋತಿಗುಡ್ಡ, ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರ, ಭೀಮರಾಯ ಭಂಡಾರಿ, ಎಚ್.ಶಿವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net