ದೇವದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಮೆರವಣಿಗೆ

devdurga meravanige
ದೇವದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ನಾಮಪತ್ರ ಸಲ್ಲಿಸುವ ಮುನ್ನ ಮೆರವಣಿಗೆ ನಡೆಯಿತು.
Published on


ದೇವದುರ್ಗ: ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಮೆರವಣಿಗೆಯಲ್ಲಿ ಆಗಮಿಸಿ ಬುಧವಾರ ನಾಮಪತ್ರ ಸಲ್ಲಿಸಿದರು.


ಗೌರಂಪೇಟೆಯ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಚಾಲನೆ ನೀಡಿದರು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ, ಬಸವೇಶ್ವರ ವೃತ್ತದ ಮೂಲಕ ಸುಮಾರು ಎರಡು ಗಂಟೆ ಮೆರವಣಿಗೆ ಜರುಗಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡೊಳ್ಳು ಕುಣಿತ, ಹಲಗೆ ಕಲಾ ತಂಡಗಳು ಭಾಗವಹಿಸಿದ್ದವು.


ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್, ಸಿಂಧನೂರು ಶಾಸಕ ವೆಂಕಟರಾವ ನಾಡಗೌಡ, ಸಿದ್ದಣ್ಣ ತಾತ ಮುಂಡರಗಿ, ಅಮರೇಶ ಪಾಟೀಲ್, ಶಿವಶಂಕರ ವಕೀಲ, ಯೂಸೂಫ್‌ಖಾನ್, ಸಿದ್ದನಗೌಡ ಮೂಡಲಗುಂಡ ಇತರರರಿದ್ದರು.


ಮೆರವಣಿಗೆಯಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆ ಸಂಚಾರ ದಟ್ಟಣೆ ಉಂಟಾಯಿತು. ಜಾಲಹಳ್ಳಿ ರಸ್ತೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಅಪಾರ ಜನರು ಸೇರಿದ್ದು, ರಾಯಚೂರು-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆ ಟ್ರಾಫಿಕ್ ಜಾಮ್‌ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net