ಶೋಕಿಗಾಗಿ ಮಾಡಬಾರದ್ದು ಮಾಡಿ ಜೈಲು ಸೇರಿದ ಪ್ರತಿಷ್ಟಿತ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು

Studentdrugs
Published on

ಬೆಂಗಳೂರು: ಆಧುನಿಕತೆ ಮುಂದುವರಿಯುತ್ತಿದ್ದ ಹಾಗೆ ಜೀವನ ಶೈಲಿಯೂ ಬದಲಾಗಿದೆ.ಈ ನಡುವೆ ಐಷಾರಾಮಿ ಜೀವನಕ್ಕೆ ಮಾರು ಹೋಗಿರುವ ಇಂದಿನ ಯುವಪಡೆ ಮಾತ್ರ ಬೆಳೆಯುವ ಮನ್ನವೇ ಹಳಿತಪ್ಪುತ್ತಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು ಸಹ ಶೋಕಿ ಮಾಡಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್​ ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ಈಗ ಗಿರಿ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಬಂಧಿತರನ್ನು ಮನೋರಂಜಿತ್(21) ಹಾಗೂ ಸುಗೇಶ್ ಕುಮಾರನ್ (21) ಎಂದು ಗುರುತಿಸಲಾಗಿದೆ. ಆರೋಪಿಗಳು ಮೂಲತಃ ತಮಿಳುನಾಡಿನವರಾಗಿದ್ದು ಬೆಂಗಳೂರಿನ ಜಯನಗರದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಮಹಾವೀರ್ ಜೈನ ಕಾಲೇಜಿನಲ್ಲಿ ಮನೋರಂಜಿತ್ ಬಿಕಾಂಹಾಗೂ ಸುಗೇಶ್ ಕುಮಾರನ್ ಬಿಎಂಎಸ್ ಅಂತಿಮ ವಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆರೋಪಿಗಳೂ ಸಹ ಡ್ರಗ್ಸ್ಗೆ ದಾಸರಾಗಿದ್ದು, ಇತರೆ ವಿದ್ಯಾರ್ಥಿಗಳಿಗೂ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ 51 ಗ್ರಾಂ ಮಾದಕ ವಸ್ತು, ನಗದು, ಕಾರು, ಮೊಬೈಲುಗಳನ್ನು ವಶಪಡಿಸಿಕೊಳ್ಳಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net