ಕನಕಪುರದಲ್ಲಿ ಸ್ಫೋಟಕ ಪತ್ತೆ

kanakapura Detect
Published on

ರಾಮನಗರ: ಕನಕಪುರ ತಾಲೂಕಿನ ‌ಬೊಮ್ಮಸಂದ್ರ ಗ್ರಾಮದ ಬಳಿ ಸೋಮವಾರ ಸ್ಫೋಟಕಗಳು ಪತ್ತೆಯಾಗಿವೆ. ಗ್ರಾಮದ ಕಾವೇರಿ‌ ನದಿ ಪಕ್ಕದಲ್ಲಿ ಪತ್ತೆಯಾದ ಇವುಗಳಲ್ಲಿ ತಾಮ್ರ ಇರಬಹದು ಎಂದು ಕೆಲವರು ಬೆಂಕಿ ಹಾಕಿ ಸ್ಫೋಟಿಸಿದ್ದಾರೆ. ಆ ಪೈಕಿ ನಾಲ್ಕು ಸ್ಫೋಟಗೊಂಡಿದ್ದು, ಇನ್ನೊಂದು ಸಜೀವ ಸ್ಫೋಟಕ ಪತ್ತೆಯಾಗಿದೆ.

ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಸ್ಫೋಟಿಸಿದ ಸಂಬಂಧ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ.

ಸ್ಫೋಟಕ ಪತ್ತೆಯಾದ ಸ್ಥಳದಲ್ಲಿ ಈ ಹಿಂದೆ ಮಿಲಿಟರಿ ಚಟುವಟಿಕೆ ನಡೆಯುತ್ತಿತ್ತು. ಆ ವೇಳೆ ಇವುಗಳು ಇಲ್ಲೇ ಉಳಿದಿರಬೇಕು. ಇಲ್ಲವೇ ಕಾವೇರಿ ನದಿ ನೀರಿನ ಮೂಲಕ ಬೇರೆಡೆಯಿಂದ ಬಂದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net