ಕಾಡಾನೆಗಳಿಂದ ಸಸಿ ಮಡಿ ನಾಶ

ಕಾಡಾನೆಗಳಿಂದ ಸಸಿ ಮಡಿ ನಾಶ
Published on

ವಿರಾಜಪೇಟೆ: ನಾಟಿಗೆ ಅಣಿಯಾಗಿದ್ದ ಭತ್ತದ ಸಸಿ ಮಡಿಗಳ ಮೇಲೆ ಕಾಡಾನೆಗಳು ದಾಳಿ ನಡೆಸಿ ಹಾನಿಗೊಳಿಸಿವೆ.

ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಐಮಂಗಲ ಗ್ರಾಮದ ಕುಂಡ್ರಂಡ ಮತ್ತು ಬೊಳ್ಳಚಂಡ ಕುಟುಂಬಕ್ಕೆ ಸೇರಿದ ಗದ್ದೆ ಮತ್ತು ತೋಟಗಳಲ್ಲಿ ಭಾನುವಾರ ಕಾಡಾನೆಗಳು ದಾಂಧಲೆ ನಡೆಸಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡಿವೆ.

ಮರಿಯಾನೆ ಸೇರಿದಂತೆ ಮೂರು ಆನೆಗಳು ಬೀಡು ಬಿಟ್ಟಿದ್ದು, ಈ ಭಾಗದಲ್ಲಿ ಉಪಟಳ ನೀಡುತ್ತಿವೆ.

ಮಲೆತಿರಿಕೆ ಬೆಟ್ಟಕ್ಕೆ ಹೊಂದಿಕೊಂಡಿರುವ ತೋಟದಲ್ಲಿ ಹಲವು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳು ರಾತ್ರಿ ಸಮಯದಲ್ಲಿ ಕಾಫಿ ತೋಟ, ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿವೆ. ಕಾರ್ಮಿಕರು, ಬೆಳೆಗಾರರು ತೋಟಗದ್ದೆಗಳತ್ತ ತೆರಳಲು ಭಯಪಡುವಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net