

ಬ್ಯಾಡಗಿ: ಹೊಲಕ್ಕೆ ನುಗ್ಗಿದ ಕಾಡು ಹಂದಿಗಳು ಸುಮಾರು 2 ಎಕರೆ ಗೋವಿನಜೋಳ ತಿಂದು, ನಾಶಪಡಿಸಿದ ಘಟನೆ ತಾಲೂಕಿನ ಕಲ್ಲೆದೇವರು ಗ್ರಾಮದ ಸೇವಾನಗರ ತಾಂಡಾದಲ್ಲಿ ಬುಧವಾರ ರಾತ್ರಿ ನಡೆದಿದೆ.
ತಾಂಡಾದ ರೈತ ನೂರಪ್ಪ ಲಮಾಣಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆಯನ್ನು ಕಾಡು ಹಂದಿಗಳು ತಿಂದು, ಹಾನಿ ಮಾಡಿವೆ.
ರೈತ ನೂರಪ್ಪ ಲಮಾಣಿ ಅರಣ್ಯಾಧಿಕಾರಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದು, ಕಾಡುಪ್ರಾಣಿಗಳು ಆಗಾಗ ನಮ್ಮ ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಜರುಗಿಸಿ, ರೈತರ ಬೆಳೆ ರಕ್ಷಿಸಬೇಕು. ಸುಮಾರು 50 ಸಾವಿರ ರೂ. ಬೆಳೆ ನಷ್ಟವಾಗಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.