

ಹಾಸನ: ಮಂಗಳೂರಿನಲ್ಲಿ ಜೈ ಹಿಂದ್ ಈಜು ಕ್ಲಬ್ ವತಿಯಿಂದ ಆಯೋಜಿಸಿದ್ದ 2025-26 ನೇ ಸಾಲಿನ ರಾಜ್ಯ ಮಟ್ಟದ ಬೈ-ಫಿನ್ ಈಜು ಸ್ಪರ್ಧೆಯಲ್ಲಿ ನಗರದ ಸುಜಲ ಕಾಲೇಜಿನ ವಿದ್ಯಾರ್ಥಿನಿ ದೇಶ್ನಾ ಪಿ.ಶೆಟ್ಟಿ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗುವ ಮೂಲಕ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
50 ಹಾಗೂ 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಪ್ರಥಮ, 200ಮೀಟರ್ ಫ್ರೀಸ್ಟೈಲ್‌ನಲ್ಲಿ ದ್ವಿತೀಯ ಮತ್ತು ಮಹಿಳೆಯರ ಮುಕ್ತ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅದೇ ರೀತಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 100 ಹಾಗೂ 200 ಮೀಟರ್ ಬ್ರೀಸ್ಟ್ ಸ್ಟ್ರೋಕ್ ಪ್ರಥಮ, 200 ಮೀಟರ್ ಫ್ರೀಸ್ಟೈಲ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಾಲೇಜಿನ ಅಧ್ಯಕ್ಷ ಡಾ.ಎಸ್.ಲೋಕೇಶ್, ಕಾರ್ಯದರ್ಶಿ ಶ್ವೇತಾ ಲೋಕೇಶ್, ಪ್ರಾಂಶುಪಾಲರು ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.