

ಹೆಬ್ರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು, ಮುದ್ರಾಡಿ ವಲಯದ ಪಡುಕುಡೂರು ಕಾರ್ಯಕ್ಷೇತ್ರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಟ್ಯೂಶನ್ ಕ್ಲಾಸ್ ಸಮಾರೋಪ ಕಾರ್ಯಕ್ರಮದಲ್ಲಿ ಬೆಂಚ್ ಹಾಗೂ ಡೆಸ್ಕ್ ಹಸ್ತಾಂತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ರವಿ ಶೆಟ್ಟಿ, ಯೋಜನಾಧಿಕಾರಿ ಲೀಲಾವತಿ, ಒಕ್ಕೂಟ ಅಧ್ಯಕ್ಷ ಹೃದಯ ಶೆಟ್ಟಿ, ಗ್ರಾಪಂ ಸದಸ್ಯೆ ತಾರಾವತಿ, ಜಗದೀಶ ಹೆಗ್ಡೆ, ಶ್ರೀನಿವಾಸ್ ಆಚಾರ್ಯ, ಶಂಕರ್ ಶೆಟ್ಟಿ, ಮುಖ್ಯಶಿಕ್ಷಕ ಹರೀಶ್ ಪೂಜಾರಿ, ಶಿಕ್ಷಕ ಸುದರ್ಶನ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು.