

ಬೆಂಗಳೂರು: ಸಾಹಿತ್ಯ, ಸಿನಿಮಾ, ರಾಜಕೀಯ ಅಂದ್ರೆ ನನಗೆ ಇಷ್ಟ ಎಂದು ನಟಿ ಮೇಘನಾ ಗಾಂವ್ಕರ್ ಹೇಳಿದ್ದಾರೆ. ವಿಜಯವಾಣಿ ವತಿಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ "ಎಜುಕೇಷನ್ ಎಕ್ಸ್ಪೋ' ಮೇಳ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿದ ಬಳಿಕ ಸಾಹಿತ್ಯ ಕೋರ್ಸ್ ಓದಬೇಕೆಂಬ ಆಸೆ ಇತ್ತು. ಈ ಬಗ್ಗೆ ಪಾಲಕರಿಗೆ ಹೇಳುವ ಧೈರ್ಯ ನನಗೆ ಇರಲಿಲ್ಲ. ನಮ್ಮ ತಂದೆಗೆ ವಿಜ್ಞಾನ ಕೋರ್ಸ್ ತೆಗೆದುಕೊಳ್ಳಬೇಕೆಂದು ಹೇಳಿದ್ದರು. ಆದರೆ, ಅಂತಿಮವಾಗಿ ಬಿ.ಕಾಂ ಓದಿದ್ದೆ. ಕಾಲೇಜಿಗೆ ಸೇರಿಸುವ ಮುನ್ನ ಪಾಲಕರು ತಮ್ಮ ಮಕ್ಕಳ ಜತೆ ಚರ್ಚಿಸಬೇಕು. ಇಷ್ಟವಾದ ಕೋರ್ಸ್ ಓದಲು ಪ್ರೋತ್ಸಾಹ ನೀಡಬೇಕು. ಯಾವುದೇ ಕಾರಣಕ್ಕೂ ಇಷ್ಟವಿಲ್ಲದಿರುವ ಕೋರ್ಸ್ ಓದುವಂತೆ ಪಾಲಕರು ತಮ್ಮ ಮಕ್ಕಳಿಗೆ ಬಲವಂತ ಮಾಡಬಾರದು ಎಂದು ಸಲಹೆ ನೀಡಿದರು. "ಎಜುಕೇಷನ್ ಎಕ್ಸ್ಪೋ'ಅಂತಹ ಕಾರ್ಯಕ್ರಮಗಳಿಗೆ ಭೇಟಿ ನೀಡಿದರೆ ಶಿಕ್ಷಣಕ್ಕೆ ಸಂಬಂಧಿಸಿದ ಜ್ಞಾನ ವೃದ್ಧಿಯಾಗುತ್ತದೆ. ನಾನು ಕಾಲೇಜುಗೆ ತೆರಳುವ ಸಂದರ್ಭದಲ್ಲಿ ಇಂತಹ ಎಕ್ಸ್ಪೋಗಳು ಇರಲಿಲ್ಲ. ಶಿಕ್ಷಣವೂ ನಮ್ಮ ದೇಶದ ಆಧಾರಸ್ತಂಭ. ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಣ ಎಂಬುದು ತುಂಬ ಮುಖ್ಯ. ನಾನು ಪ್ರವಾಸ ಮಾಡುವಾಗ ಆ ರಾಜ್ಯದ ಸಾಕ್ಷರತೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೇನೆ.ಕರ್ನಾಟಕವು ಶೇ.100 ಸಾಕ್ಷರತೆ ಹೊಂದಿರುವ ರಾಜ್ಯವಾಗಬೇಕು ಎಂದರು.
ಬಿ.ಕಾಂ ಓದಿದ್ದೆ:
ಶಾಲಾ-ಕಾಲೇಜಿನಲ್ಲಿ ಮಕ್ಕಳಿಗೆ ಪ್ರವೇಶ ಕಲ್ಪಿಸುವುದು,ಕಳುಹಿಸುವುದು ಪಾಲಕರಿಗೆ ಐಎಎಸ್ ಪರೀಕ್ಷೆ ಬರೆದಂತೆ.ವಿಜಯವಾಣಿ ಆಯೋಜಿಸಿರುವ "ಎಜುಕೇಷನ್ ಎಕ್ಸ್ಪೋ'ದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಒಂದೇ ಸೂರಿನಡಿ ದೊರೆಯಲಿದೆ. ಇದನ್ನು ಪಾಲಕರು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ನಾನು ಬಿ.ಕಾಂ ಕೋರ್ಸ್ ಓದಿದ್ದೆ. ನನ್ನ ಅಣ್ಣ "ಚಾರ್ರ್ಟಡ್ ಅಕೌಂಟೆಂಟ್'(ಸಿಎ) ಓದಿದ್ದಾನೆ. ನನ್ನ ಅಣ್ಣ ಆ ಕೋರ್ಸ್ ಓದುವಂತೆ ನನಗೆ ಪುಸ್ತಕ ತಂದುಕೊಟ್ಟ. ಆ ಪುಸ್ತಕಗಳನ್ನು ನೋಡಿದ ತಕ್ಷಣ "ಮೈಗ್ರೇನ್ ಅಟ್ಯಾಕ್'ಆಯ್ತು. ಆಮೇಲೆ ಸಿನಿಮಾ ಕ್ಷೇತ್ರಕ್ಕೆ ಬಂದೆ ಎಂದು ನಟ ದಿಗಂತ್ ಹೇಳಿದರು.
ನನ್ನ ಇಬ್ಬರು ಮಕ್ಕಳು ಶಾಲಾ-ಕಾಲೇಜಿನಲ್ಲಿ ಓದುತ್ತಿದ್ದಾರೆ. "ಎಜುಕೇಷನ್ ಎಕ್ಸ್ಪೋ'ಕ್ಕೆ ಭೇಟಿ ನೀಡಿ ಕೋರ್ಸ್ಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಇಂತಹ ಕಾರ್ಯಕ್ರಮಗಳಿಂದ ನಮ್ಮಂತಹ ಪಾಲಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. "ಎಕ್ಸ್ಪೋ'ದಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ಯಾವ ಕೋರ್ಸ್ ಓದಿದರೆ ಒಳ್ಳೆಯದು ಎಂಬುದರ ಬಗ್ಗೆ ಪರಿಣಿತರಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ವಿಆರ್ಎಲ್ ಲಾಜಿಸ್ಟಿಕ್ ಕಂಪನಿ, ರಾಜ್ಯದ ಮೂಲೆ ಮೂಲೆಗೆ ಸಾರಿಗೆ ಸೌಲಭ್ಯ ಕಲ್ಪಿಸಿರುವುದರಿಂದ ಗಮನಾರ್ಹ.
ಗುರುರಾಜ್ ಕುಲಕರ್ಣಿ. ನಿರ್ದೇಶಕ