ಆಸೆಯೇ ದುಃಖಕ್ಕೆ ಮೂಲ

12knk3
ಕನಕಗಿರಿಯಲ್ಲಿ ಬುದ್ಧ ಜಯಂತಿ ಆಚರಿಸಲಾಯಿತು. ಪಪಂ ಅಧ್ಯಕ್ಷೆ ಹುಸೇನ್‌ಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ರಾಜಾಸಾಬ ನಂದಾಪುರ, ಹರೀಶ ಪೂಜಾರ ಇತರರಿದ್ದರು.
Published on

ಕನಕಗಿರಿ: ಗೌತಮ ಬುದ್ಧನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.

ಪಟ್ಟಣದ ಬುದ್ಧ ಸರ್ಕಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗೌತಮ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಮನೆತನದಲ್ಲಿ ಜನಿಸಿದ ಗೌತಮ ಬುದ್ಧ ತಾನು ಕಂಡ ದೃಶ್ಯಗಳಿಂದ ಆಸೆಯೇ ದುಃಖಕ್ಕೆ ಮೂಲವೆನಿಸಿತು. ಅದಕ್ಕಾಗಿ ಎಲ್ಲವನ್ನೂ ತ್ಯಜಿಸಿದ. ಬೌದ್ಧ ಧರ್ಮ ಸ್ಥಾಪಿಸಿ, ವಿಶ್ವಪರ್ಯಟನೆ ಮೂಲಕ ಸಂದೇಶ ಸಾರಿದ.

ಗೌತಮ ಬುದ್ಧನ ವಿಪಶ್ಶನ ಧ್ಯಾನ ಮಾರ್ಗ ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ.  ಗೌತಮ ಬುದ್ಧ ಸ್ಥಾಪಿಸಿದ ಬೌದ್ಧ ಧರ್ಮ ಕೇವಲ ನಮ್ಮ ದೇಶವಲ್ಲದೇ, ಪ್ರಪಂಚದ ಮೂಲೆ ಮೂಲೆಯಲ್ಲು ಆಚರಣೆಯಾಗುತ್ತಿದೆ. ಬುದ್ಧ ಜನಿಸಿದ ಭಾರತವನ್ನು ನೋಡಲು ಹಲವು ವಿದೇಶಿ ಪ್ರವಾಸಿಗರೂ ಆಗಮಿಸುತ್ತಾರೆ ಎಂದರು.

ಪಪಂ ಅಧ್ಯಕ್ಷೆ ಹುಸೇನ್‌ಬೀ ಚಳ್ಳಮರದ, ಸದಸ್ಯರಾದ ರಾಜಾಸಾಬ್ ನಂದಾಪುರ, ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡದ, ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ತಾಪಂ ಇಒ ರಾಜಶೇಖರ, ಪ್ರಗತಿಪರ ಸಂಘಟನೆ ತಾಲೂಕು ಸಂಚಾಲಕ ಪಾಮಣ್ಣ ಅರಳಿಗನೂರು, ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net