ದೇಶಪಾಂಡೆ-ಅಮಿತ್ ಷಾ ಭೇಟಿ ಮಾಡಿದ್ಯಾಕೆ.?

Deshapande
Published on

ಕಾರವಾರ:ಕಾಂಗ್ರೆಸ್ ಹಿರಿಯ ನಾಯಕ, ಆರ್.ವಿ.ದೇಶಪಾಂಡೆ ಅವರು ಕೇಂದ್ರ ಗೃಹ ಸಚಿವ ಬಿಜೆಪಿಯ ಅಮಿತ್ ಷಾ ಅವರ ಜತೆಗೆ ಚರ್ಚೆ ನಡೆಸುತ್ತಿರುವ ಫೋಟೋವೊಂದು ವೈರಲ್ ಆಗಿದ್ದು, ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಸಚಿವ ಪ್ರಹ್ಲಾದ ಜೋಶಿ ಅವರೂ ಚಿತ್ರದಲ್ಲಿದ್ದಾರೆ.

ದೇಶಪಾಂಡೆ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬಂಥ ಚರ್ಚೆಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

9 ಬಾರಿ ಶಾಸಕರಾಗಿರುವ ವಿಧಾನಸಭೆಯ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಅವರಿಗೆ ಈ ಬಾರಿ‌ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ಸಿಕ್ಕಿಲ್ಲ.

ಇದರಿಂದ ಅವರ ಬೆಂಬಲಿಗರು ಬೇಸರದಲ್ಲಿದ್ದಾರೆ. ಈಗ ವೈರಲ್ ಆಗಿರುವ ಫೋಟೋಕ್ಕೂ ಇದಕ್ಕೂ ಸಂಬಂಧ ಇದೆಯೇ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:ಹಳಿಯಾಳ ಪುರಸಭೆಯಲ್ಲಿ ಡಿಜಿಟಲ್ ಪಾವತಿಗೆ ಅವಕಾಶ
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, `ವರಿಷ್ಠರ ಮಟ್ಟದಲ್ಲಿ ಏನು ನಡೆದಿದೆ ಗೊತ್ತಿಲ್ಲ.

ಆದರೆ, ನಮ್ಮ ಹಂತದಲ್ಲಿ ಅಂಥ ಯಾವುದೇ ಚರ್ಚೆಯಾಗಿಲ್ಲ' ಎಂದಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net