ಸೌಕರ್ಯ ವಂಚಿತ ಕೈಗಾರಿಕಾ ಪ್ರದೇಶ

FotoJet
Published on

ಸಿ.ಎ.ಮುರಳೀಧರ್​ ಗೌರಿಬಿದನೂರು

ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಪ್ರಾರಂಭವಾಗಿ 15 ವರ್ಷ ಕಳೆಯುತ್ತಿದ್ದು, ಮೂರನೇ ಹಂತಕ್ಕೆ ಭೂಸ್ವಾಧಿನ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಒಂದು ಮತ್ತು ಎರಡನೇ ಹಂತದ ಕೈಗಾರಿಕೆ ವಲಯಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ಮತ್ತು ಕೆಐಎಡಿಬಿ ವಿಫಲವಾಗಿವೆ.

ಎರಡೂ ಹಂತಗಳಲ್ಲಿ ವಿವಿಧ ಕೈಗಾರಿಕೆಗಳ ಜತೆಗೆ ಖಾಸಗಿ ವಸತಿ ನಿಲಯ, ಪೆಟ್ರೋಲ್​ ಬಂಕ್​ ಸೇರಿ ಮದ್ಯ ಮಾರಾಟ ಅಂಗಡಿಗಳು ತಲೆಯೆತ್ತಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ಆದರೆ, ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸದ ಕಾರಣ ಜನ ಪರದಾಡುವಂತಾಗಿದೆ.

ಇಎಸ್​ಐ ಆಸ್ಪತ್ರೆ: ಕೈಗಾರಿಕಾ ವಲಯದಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇಎಸ್​ಐ ಆಸ್ಪತ್ರೆಯಿಲ್ಲ. ಅನಾರೋಗ್ಯ ಅಥವಾ ಅವಡದ ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ಗೌರಿಬಿದನೂರಿನ ಇಎಸ್​ಐ ಆಸ್ಪತ್ರೆಗೆ ಹೋಗಬೇಕಾಗಿದೆ. ಸ್ಥಳಿಯವಾಗಿಯೇ ಇಎಸ್​ಐ ಆಸ್ಪತ್ರೆ ಪ್ರಾರಂಭಿಸಿದರೆ ಸಾವಿರಾರು ಕಾರ್ಮಿಕರು ಹಾಗೂ ಕುಟುಂಬದವರಿಗೆ ಅನುಕೂಲವಾಗಲಿದೆ.

ಸೌಲಭ್ಯ ಕಲ್ಪಿಸುವಲ್ಲಿ ವಿಫಲ: ಕೆಐಎಡಿಬಿ ಕೇವಲ ರೈತರಿಂದ ಜಮೀನು ಸ್ವಾಧಿನಪಡಿಸಿಕೊಂಡು ಉದ್ಯಮಿಗಳಿಗೆ ಜಾಗ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದೆ. ಜತೆಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಸಾವಿರಾರು ಕಾರ್ಮಿಕರು ಕಾರ್ಯನಿರ್ವಹಿಸುವ ಕೈಗಾರಿಕಾ ಪ್ರದೇಶದಲ್ಲಿ ಕೈಗೆಟಕುವ ದರದ ವಸತಿ ನಿಲಯಗಳು, ಕನಿಷ್ಠ ಬೀದಿದೀಪ, ಶುದ್ಧ ಕುಡಿಯುವ ನೀರಿನ ಟಕ ಹಾಗೂ ಶೌಚಗೃಹ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಕಾರ್ಮಿಕರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.

ಅಗ್ನಿಶಾಮಕ ಸೇವೆ ತುರ್ತು ಅಗತ್ಯ: ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಹಾಗೂ ಪ್ಲಾಸ್ಟಿಕ್​ ಸಂಬಂಧಿ ಕಾರ್ಖಾನೆಗಳು ಹೆಚ್ಚಿವೆ. ತ್ಯಾಜ್ಯಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಆಗಾಗ ಅಗ್ನಿ ಅವಡ ಸಂಭವಿಸುವುದು ಸಾಮಾನ್ಯವಾಗಿದೆ. ಕಳೆದ ತಿಂಗಳು ಕಾರ್ಖಾನೆಯೊಂದರ ಕಸದ ರಾಶಿಗೆ ಬಿದ್ದ ಬೆಂಕಿ ನಂದಿಸಲು ಅರ್ಧದಿನ ಹರಸಾಹಸ ಪಡಬೇಕಾಯಿತು. ಆದ್ದರಿಂದ ಇಂತಹ ಅವಡಗಳು ಸಂಭವಿಸಿದ ತಣ ಬೆಂಕಿ ನಂದಿಸಲು ಸ್ಥಳಿಯವಾಗಿಯೇ ಒಂದು ಅಗ್ನಿಶಾಮಕ ಠಾಣೆ ಆರಂಭಿಸಬೇಕಿದೆ.

ಕುಡುಮಲಕುಂಟೆಯ ಮೊದಲ ಮತ್ತು ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲೆ ಮೂಲಸೌಲಭ್ಯ ಕಲ್ಪಿಸಿಲ್ಲ. ಆದರೆ 3ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧಿನ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಆದ್ದರಿಂದ ಆ ವಲಯಗಳಲ್ಲಿ ಮೊದಲು ಮೂಲಸೌಲಭ್ಯ ವ್ಯವಸ್ಥೆ ಮಾಡಬೇಕು. | ವೆಂಕಟೇಶ್​ ಸ್ಥಳಿಯ ವಾಸಿ ಕೈಗಾರಿಕಾ ಪ್ರದೇಶ ದಲ್ಲಿ ಅಗ್ನಿ ಶಾಮಕ ದಳ ಟಕ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಮೂಲಸೌಕರ್ಯ ಕಲ್ಪಿಸುವಂತೆ ಕೆಐಎಡಿಬಿಗೆ ಸೂಚನೆ ನೀಡಲಾಗಿದೆ. | ಶಾಸಕ ಕೆ.ಎಚ್​.ಪುಟ್ಟಸ್ವಾಮಿಗೌಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net