ದಂತಕ್ಷಯದಿಂದ ಮಾರಣಾಂತಿಕ ಪರಿಣಾಮ : ಡಾ.ಸಹನಾ ಮಾಬೆನ್ ಮಾಹಿತಿ

New Project (35)
Published on

ಮೂಲ್ಕಿ: ದಂತ ಪಂಕ್ತಿಯು ದೇಹದ ವಿವಿಧ ಅಂಗಾಂಗಗಳ ಸಂಪರ್ಕ ಹೊಂದಿರುವ ಕಾರಣ ದಂತ ಕ್ಷಯವು ಮಾರಣಾಂತಿಕ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಕೋ-ಆರ್ಡಿನೇಟರ್ ಡಾ.ಸಹನಾ ಮಾಬೆನ್ ಹೇಳಿದರು.

ಚಿತ್ರಾಪು ಯುವಕ-ಯುವತಿ ಮಂಡಲ ಹಾಗೂ ಮಹಿಳಾ ಮಂಡಲದ ಸಹಯೋಗದಲ್ಲಿ ಮಂಗಳೂರು ಎ.ಬಿ.ಶೆಟ್ಟಿ ಸ್ಮಾರಕ ಮಹಾವಿದ್ಯಾಲಯ ವತಿಯಿಂದ ಚಿತ್ರಾಪು ಕೆ.ಎಸ್.ರಾವ್ ಸ್ಮಾರಕ ಪ್ರೌಢಶಾಲೆ ಹಾಗೂ ಸ.ಹಿ.ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಆಯೋಜಿಸಲಾದ ದಂತ ಚಿಕಿತ್ಸಾ ಉಚಿತ ಶಿಬಿರದಲ್ಲಿ ಮಾತನಾಡಿದರು.

ಯುವಕ ಮಂಡಲದ ಅಧ್ಯಕ್ಷ ತುಷಾರ್ ಕೆ, ಕಾರ್ಯದರ್ಶಿ ಸಂದೀಪ್ ಸುವರ್ಣ, ಮಹಿಳಾ ಮಂಡಲದ ಅಧ್ಯಕ್ಷೆ ಸಾವಿತ್ರಿ ಪುಷ್ಪರಾಜ್, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿಯರಾದ ಶಾಂತಿ ಪೈ, ಸವಿತಾ, ಅಂಗನವಾಡಿ ಕಾರ್ಯಕರ್ತೆ ಕುಸುಮಾ ದಾಮೋದರ್, ಮಹಿಳಾ ಮಂಡಲದ ಕಾರ್ಯದರ್ಶಿ ಸುದರ್ಶನಿ ಮಾರ್ಗರೆಟ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net