

ಗುರುಪುರ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಅಂಗವಾಗಿ ಮೂಡುಬಿದಿರೆ ಬಿಜೆಪಿ ರೈತ ಮೋರ್ಚಾ ಮತ್ತು ಬಜ್ಪೆ ಮಹಾಶಕ್ತಿ ಕೇಂದ್ರ ಆಶ್ರಯದಲ್ಲಿ ಶ್ರೀನಿವಾಸ ದಂತ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ವಠಾರದಲ್ಲಿ ಆಯೋಜಿಸಲಾದ ದಂತ ಚಿಕಿತ್ಸಾ ಉಚಿತ ಶಿಬಿರವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷರಾದ ಸುನೀಲ್ ಆಳ್ವ, ಶಾಂತಿಪ್ರಸಾದ್ ಹೆಗ್ಡೆ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಮಂಡಲದ ಮಾಜಿ ಅಧ್ಯಕ್ಷ ಈಶ್ವರ ಕಟೀಲ್, ಉಪಾಧ್ಯಕ್ಷ ಶ್ರಮ ಸುಮನಿ ಶೆಟ್ಟಿ, ಮೂಡುಬಿದಿರೆ ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಬಜ್ಪೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿಜಯ್ ಕುಮಾರ್ ಕಾನ, ಕಾರ್ಯದರ್ಶಿ ದಿನೇಶ್ ಶೆಟ್ಟಿ ಚಿಕ್ಕಪರಾರಿ, ಪ್ರಮುಖರಾದ ಜೋಕಿಂ ಡಿ’ಕಾಸ್ತ, ಚಿತ್ರೇಶ್ ಶೆಟ್ಟಿ, ನಾಗೇಶ್ ಪೂಜಾರಿ ತೋಡಾರು, ಶರತ್ ಸಿ.ಬಾಬು, ಮಂಡಲ ಕಾರ್ಯದರ್ಶಿ ಪ್ರಭಾಕರ ಕುಲಾಲ್, ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಅರ್ಬಿ ವಂದಿಸಿದರು.