

ಕಾರ್ಕಳ: ನಿಟ್ಟೆ ರೋಟರಿ ಕ್ಲಬ್ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭ ಕೆ.ಎಸ್.ಹೆಗ್ಡೆ ಡೆಂಟಲ್ ಕ್ಲಿನಿಕ್ ಮತ್ತು ನಿಟ್ಟೆ ರೋಟರಿ ಕ್ಲಬ್ ಸಹಯೋಗದಲ್ಲಿ ದಂತ ಚಿಕಿತ್ಸಾ ಶಿಬಿರ ಕಲ್ಯಾ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ನಿಟ್ಟೆ ಡೆಂಟಲ್ ಸೆಂಟರ್ ಮುಖ್ಯ ಅಧೀಕ್ಷಕಿ ಡಾ.ಚೇತನ ಶಶಿಕಾಂತ ಮತ್ತು ಮಂಗಳೂರಿನ ಎ.ಬಿ.ಶೆಟ್ಟಿ ಮೆಮೋರಿಯಲ್ ಡೆಂಟಲ್ ಕಾಲೇಜಿನ ತಂಡ ನೇತೃತ್ವ ವಹಿಸಿತ್ತು. ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಕೆ. ಸತೀಶ್ ಕುಮಾರ್, ಜಿಲ್ಲಾ ಗವರ್ನರ್ ದೇವಾನಂದ್, ಸಹಾಯಕ ಗವರ್ನರ್ ಅನಿಲ್ ಡೇಸಾ, ಸುರೇಶ ನಾಯಕ್ ರೋಟರಿ ಕ್ಲಬ್ ನಿಟ್ಟೆಯ ಹಿರಿಯ ಸದಸ್ಯ ಯೋಗೀಶ್ ಹೆಗ್ಡೆ, ವೀಣಾ ದೇವಿ, ಕೃಷ್ಣ ಪ್ರಸಾದ್, ಸುಧಾಕರ್ ಕೋಟ್ಯಾನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುಭಾಷ್ ಚಂದ್ರ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.