

ಹೆಬ್ರಿ: ದೇವಾಡಿಗ ವರ್ಗವು ಸೌಮ್ಯ ಸ್ವಭಾವದಿಂದ ಎಲ್ಲರೊಂದಿಗೆ ಬೆರೆತು ಸಹಬಾಳ್ವೆ ಮಾಡುವ ವರ್ಗವಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಪ್ರಭಾವವನ್ನು ಹೊಂದಿದೆ. ಹೆಬ್ರಿಯಲ್ಲಿ ಸಂಘಟನೆ ಬೆಳೆದು ಎಲ್ಲ ಸಂಘಟನೆಗಳೊಂದಿಗೆ ಪೂರಕವಾಗಿ ಮುಂದವರಿಯಲಿ ಎಂದು ಮುದ್ರಾಡಿ ಗುರುರಕ್ಷಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಂ. ಮಂಜುನಾಥ ಪೂಜಾರಿ ಹೇಳಿದರು.
ಹೆಬ್ರಿ ದೇವಾಡಿಗ ಸುಧಾರಕ ಸಂಘ ವತಿಯಿಂದ ಭಾನುವಾರ 15ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಹೆಬ್ರಿ ದೇವಾಡಿಗ ಸಭಾಭವನ ಉದ್ಘಾಟನೆ, ಪುರಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘ ಅಧ್ಯಕ್ಷ ಶಂಕರ ದೇವಾಡಿಗ ಚಾರ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ಜನಾರ್ದನ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ದೇವಾಡಿಗರ ಸಂಘ ಅಧ್ಯಕ್ಷ ಅಶೋಕ್ ಮೊಯಿಲಿ, ಧ.ಗ್ರಾ. ಯೋಜನೆ ಪ್ರಾದೇಶಿಕ ನಿರ್ದೇಶಕ ಅಮರ ಪ್ರಸಾದ್, ಬಾರ್ಕೂರು ಏಕನಾಥೇಶ್ವರ ದೇವಸ್ಥಾನ ಕಾರ್ಯಾಧ್ಯಕ್ಷ ಜನಾದರ್ನ ಪಣಂಬೂರು, ಕಾರ್ಕಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನಿವೃತ್ತ ಪ್ರಾಂಶುಪಾಲ ಬಾಬು ದೇವಾಡಿಗ ಅಂಬ್ಲಮೊಗರು, ಶಿವಪುರ ಕೊರಗಜ್ಜ ದೇವಸ್ಥಾನ ಧರ್ಮದರ್ಶಿ ಪುನೀತ್ ಶೆಟ್ಟಿ, ಯಾದವ ದೇವಾಡಿಗ ಹಳೆಯಂಗಡಿ, ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ, ರೀನಾ ದಯಾನಂದ ದೇವಾಡಿಗ, ಸಂಘ ಸ್ಥಾಪಕಾಧ್ಯಕ್ಷ ಸದಾನಂದ ಮೊಯ್ಲಿ, ಗೋವಿಂದ ದೇವಾಡಿಗ, ಮಂಜುನಾಥ ದೇವಾಡಿಗ ದಾವಣಗೆರೆ ಮೊದಲಾದವರಿದ್ದರು. ಕಾರ್ಯದರ್ಶಿ ಶಂಭು ಸೇರಿಗಾರ ವರದಿ ಮಂಡಿಸಿದರು. ಶಂಭು ದೇವಾಡಿಗ ಸ್ವಾಗತಿಸಿದರು. ಉದಯ ಸೇರಿಗಾರ ವಂದಿಸಿದರು. ಶಿಕ್ಷಕ ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.
ದೇವಾಡಿಗರು ದೇವಸ್ಥಾನಗಳಲ್ಲಿ ದೇವರ ಚಾಕರಿ ಮಾಡುವ ಪ್ರತಿಷ್ಠಿತ ವರ್ಗವಾಗಿದ್ದು ಇಂದಿನ ದಿನಗಳಲ್ಲಿ ಹೊರಜಗತ್ತಿಗೆ ಮಾರುಹೋಗಿ ಜಾತಿಯ ವೃತ್ತಿ ನಶಿಸಿ ಹೋಗುತ್ತಿರುವುದು ಬೇಸರದ ಸಂಗತಿ. ದೇವಾಡಿಗರು ದೇವಸ್ಥಾನದಲ್ಲಿ ದೇವಕಾರ್ಯ ಮಾಡುವುದನ್ನು ನಿಲ್ಲಿಸದೆ ಪರಂಪರೆಯನ್ನು ಉಳಿಸಬೇಕು. ವೈ.ದಿವಾಕರ ಶೆಟ್ಟಿ ಮುನಿಯಾಲು ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ https://www.vijayavani.net/auto-rickshaw-drivers-association-meeting https://www.vijayavani.net/hejamady-panchayat-receives-village-award