

ಕಲಬುರಗಿ: ಹಲ್ಲುಗಳು ಸ್ವಚ್ಛವಾಗಿದ್ದರೆ ದೇಹ ಆರೋಗ್ಯವಾಗಿದ್ದಂತೆ ಎಂದು ದಂತವೈದ್ಯ ಡಾ.ಧರ್ಮರಾಜ ಬಿ ಪಾಟೀಲ ಹೇರೂರ (ಕೆ) ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಜಯನಗರದ ಡೆಂಟಾ ಕೇರ್ ಸೂಪರ್ ಸ್ಪೆಷಾಲಿಟಿ, ಆದರ್ಶ ನಗರದ ಡೆಂಟಲ್ ಕ್ಲಿನಿಕ್, ಲೇಸರ್ ಡೆಂಟಿಸ್ಟರಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿವಿಯ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜನರಿಗೆ ಹಲ್ಲುಗಳ ಬಗ್ಗೆ ಜಾಗ್ರತಿ ಮತ್ತು ಅರಿವಿನ ಕೊರತೆ ಇದೆ. ತುಂಬಾ ಗಂಭೀರವಾದ ಸಮಸ್ಯೆಯಾದಾಗ ಮಾತ್ರ ವೈದ್ಯರನ್ನು ಕಾಣುತ್ತಾರೆ. ಆದರೆ ಹಲ್ಲಿನ ಸಣ್ಣಪುಟ್ಟ ಸಮಸ್ಯೆಯಾದರೂ ಸಹ ವೈದ್ಯರನ್ನು ಕಾಣಬೇಕು. ಇಂದಿನ ಯುಗದಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಗಳು ಲಭ್ಯ ಇದೆ. ದಂತ ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ ಆದರೆ ಜನರು ತುಂಬಾ ಗಂಭೀರ ಸಮಸ್ಯೆ ಬಂದಾಗ ವೈದ್ಯರನ್ನು ಕಾಣುತ್ತಿರುವುದರಿಂದ ಹಣ ಸಮಯ ಮತ್ತು ಹೆಚ್ಚಿನ ನೋವು ಅನುಭವಿಸುತ್ತಾರೆ. ಪ್ರತಿಯೊಬ್ಬರು ವರ್ಷಕ್ಕೊಮ್ಮೆ ತಮ್ಮ ದಂತದ ಆರೋಗ್ಯಕ್ಕಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉಪ ಕುಲಪತಿ ಪ್ರೊ.ಗೂರು ಶ್ರೀರಾಮಲು ಮಾತನಾಡಿ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಈ ರೀತಿಯ ಕಾರ್ಯಕ್ರಮ ಏರ್ಪಡಿಸಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ ಬೈರಪ್ಪ ಮಾತನಾಡಿ ವಿಶ್ವವಿದ್ಯಾಲಯದ ಸಿಬ್ಬಂದಿಗಳ ಆರೋಗ್ಯದ ದ್ರಷ್ಟಿಯಿಂದ ಹಲವು ಕಾರ್ಯಗ್ರಮಗಳು ಹಮ್ಮಿಕೊಳ್ಳುತ್ತಿದ್ದೇವೆ. ಆರೋಗ್ಯ ಸಮಿತಿಯ ಅಧ್ಯಕ್ಷನಾದ ಮೇಲೆ ವಿವಿ ಆವರಣದ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಅಲ್ಲದೆ ವಿಶ್ವವಿದ್ಯಾಲಯಕ್ಕೆ ಆಂಬುಲೆನ್ಸ್ ಸೇವೆ ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು. ಅಲ್ಲದೆ ಉಚಿತ ತಪಾಸಣೆಗೆ ಬಂದವರಿಗೆ ದಂತದ ಆರೋಗ್ಯ ಕಿಟ್ ಗಳನ್ನು ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಕುಲಸಚಿವ ಪ್ರೊ.ರಮೇಶ ಲಂಡನಕರ್ˌ ಸಿಂಡಿಕೇಟ್ ಸದಸ್ಯ ಉದಯ ಪಾಟೀಲˌ ಡಾ.ಶೀತಲ್ ಡಿ ಪಾಟೀಲ ಹೇರೂರˌ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್ ಜಿ ಕಣ್ಣೂರˌ ಡಾ.ಸುರೇಶ ಜಂಗೆˌ ಡಾ. ಶರಣಮ್ಮ ಬಿರಾದಾರˌ ಡಾ.ಪ್ರಿಯಾ ತೋಸ್ನಿವಾಲಾˌ ಡಾ.ಸುಮಯಾ ಖಾನ್ˌ ಡಾ. ವೈಷ್ಣವಿ ತಾಂಡೇಲಿˌ ಡಾ.ಸ್ನೇಹಾ ಸಿರಿನ್ˌ ಡಾ.ಸಂಯುಕ್ತಾ ಪಾಟೀಲ ಸೇರಿದಂತೆ ಇತರರು ಇದ್ದರು.