ಈಡೀಸ್ ಸೊಳ್ಳೆಯಿಂದ ಡೆಂಘೆ ಜ್ವರ: ನೋಡೆಲ್ ಅಧಿಕಾರಿ ಸಂಧ್ಯಾ ಮಾಹಿತಿ

New Project (2)
Published on

ಕೊಕ್ಕಡ: ಡೆಂಘೆ ಜ್ವರಕ್ಕೆ ಈಡೀಸ್ ಸೊಳ್ಳೆ ಕಾರಣವಾಗಿದ್ದು, ಸಂಗ್ರಹಗೊಂಡ ನೀರಿನಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿಯಾಗುತ್ತದೆ. ಮುಂಜಾಗರೂಕತೆ ಕ್ರಮವಾಗಿ ಮನೆಯ ಸುತ್ತಲೂ ನೀರು ಸಂಗ್ರಹಗೊಳ್ಳದಂತೆ ಎಚ್ಚರ ವಹಿಸಬೇಕು. ಜ್ವರ, ಮೈ ಕೈ ನೋವು ಸಹಿತ ಯಾವುದೇ ಸಮಸ್ಯೆಗಳಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ವಿಜ್ಞಾನ ಶಿಕ್ಷಕಿ ಸಂಧ್ಯಾ ಪಿ.ಕೆ. ಹೇಳಿದರು. ತಾಲೂಕು ಆರೋಗ್ಯ ಅಧಿಕಾರಿ ಸೂಚನೆಯಂತೆ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಶಾಲೆಯಲ್ಲಿ ಆಯೋಜಿಸಿದ ಡೆಂಘೆ ವಿರುದ್ಧ ಮುನ್ನೆಚ್ಚರಿಕೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಟ್ಟೂರಿನ ಆಶಾ ಕಾರ್ಯಕರ್ತೆ ಚೈತ್ರಾ, ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net