

ಬೆಂಗಳೂರು: ಮಳೆ ಆರಂಭದೊಂದಿಗೆ ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಹೊರೆ ತಪ್ಪಿಸಲು ಡೆಂಘೆ ಪರೀಕ್ಷೆ ದರ ನಿಗದಿ ಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘೆ ಜ್ವರಕ್ಕೆ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ತಪ್ಪಿಸಲು ಎಲಿಸಾ ಎನ್‌ಎಸ್‌ಐ 300ರೂ, ಎಲಿಸಾ 1ಜಿಎಂ ಪರೀಕ್ಷೆಗೆ 300 ರೂ. ಹಾಗೂ ರ‌್ಯಾಪಿಡ್ ಟೆಸ್ಟ್‌ಗೆ 250 ರೂ. ನಿಗದಿ ಪಡಿಸಿದೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020, ಸೆಕ್ಷನ್ 4 (1) ಮತ್ತು 4 (2) ಕೆ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳು ಮತ್ತು ಡಯಾಗ್ನೋಸ್ಟಿಕ್ ಲ್ಯಾಬೊರೇಟರಿಗಳು ಇಲಾಖೆಯ ಈ ಅದೇಶದಂತೆ ಏಕರೀತಿಯ ನಿಗದಿತ ದರದಲ್ಲೇ ಸೇವೆ ನೀಡಬೇಕು ಎಂದು ಸೂಚಿಸಲಾಗಿದೆ.